ಲಯನ್ ಸ್ಪಿನ್ ಮೋಡಿ: ಆಸ್ಟ್ರೇಲಿಯಾ ಜಯಭೇರಿ ವೆಲಿಂಗ್ಟನ್: ನೇಥನ್ ಲಯನ್ (65ಕ್ಕೆ6) ಸ್ಪಿನ್ ಮೋಡಿಯ ಮುಂದೆ ಕಿವೀಸ್ ಬ್ಯಾಟಿಂಗ್ ಪಡೆ ಕುಸಿಯಿತು. ಇದರಿಂದಾಗಿ ಆಸ್ಟ್ರೇಲಿಯಾ ತಂಡವು ಇಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 172 ರನ್‌ಗಳ ಭಾರಿ ಜಯ ಸಾಧಿಸಿತು. ಭಾನುವಾರ 367 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆತಿಥೇಯ ತಂಡವು 64.4 ಓವರ್‌ಗಳಲ್ಲಿ 196 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ನ್ಯೂಜಿಲೆಂಡ್ ತಂಡದಲ್ಲಿರುವ ಬೆಂಗಳೂರು ಮೂಲದ ರಚಿನ್ ರವೀಂದ್ರ (59 ರನ್) ಮತ್ತು ಡೆರಿಲ್ ಮಿಚೆಲ್ (38 ರನ್) ಅವರು ಒಂದಿಷ್ಟು ಹೊತ್ತು ಆಸ್ಟ್ರೇಲಿಯಾದ ದಾಳಿಯನ್ನು ಎದುರಿಸಿ ನಿಂತರು. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್ ಆಸ್ಟ್ರೇಲಿಯಾ: 115.1 ಓವರ್‌ಗಳಲ್ಲಿ 383. ನ್ಯೂಜಿಲೆಂಡ್: 43.1 ಓವರ್‌ಗಳಲ್ಲಿ 179. ಎರಡನೇ ಇನಿಂಗ್ಸ್ ಆಸ್ಟ್ರೇಲಿಯಾ: 51.1 ಓವರ್‌ಗಳಲ್ಲಿ 164 (ನೇಥನ್ ಲಯನ್ 41, ಕ್ಯಾಮರಾನ್ ಗ್ರೀನ್ 34, ಟ್ರಾವಿಸ್ ಹೆಡ್ 29, ಟಿಮ್ ಸೌಥಿ 46ಕ್ಕೆ2, ಮ್ಯಾಟ್ ಹೆನ್ರಿ 36ಕ್ಕೆ3, ಗ್ಲೆನ್ ಫಿಲಿಪ್ಸ್ 45ಕ್ಕೆ5) ನ್ಯೂಜಿಲೆಂಡ್: 64.4 ಓವರ್‌ಗಳಲ್ಲಿ 196 (ರಚಿನ್ ರವೀಂದ್ರ 59, ಡೆರಿಲ್ ಮಿಚೆಲ್ 38, ಸ್ಕಾಟ್ ಕಗ್ಲೆಜಿನ್ 26, ಜೋಶ್ ಹ್ಯಾಜಲ್‌ವುಡ್ 20ಕ್ಕೆ2, ನೇಥನ್ ಲಯನ್ 65ಕ್ಕೆ6) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 172 ರನ್‌ಗಳ ಜಯ ಹಾಗೂ ಸರಣಿಯಲ್ಲಿ 1–0 ಮುನ್ನಡೆ. ಪಂದ್ಯಶ್ರೇಷ್ಠ: ಕ್ಯಾಮರಾನ್ ಗ್ರೀನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.