ಐಪಿಎಲ್‌: ಡೆಲ್ಲಿಗೆ ಲುಂಗಿ ಗಿಡಿ ಬದಲು ಮೆಕ್‌ಗುರ್ಕ್‌ ನವದೆಹಲಿ: ದಕ್ಷಿಣ ಆಫ್ರಿಕದ ವೇಗದ ಬೌಲರ್ ಲುಂಗಿ ಗಿಡಿ ಅವರು ಗಾಯದ ಕಾರಣ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಬೇಕಿತ್ತು. ಗಿಡಿ ಬದಲು ಡೆಲ್ಲಿ ಕ್ಯಾಪಿಟಲ್ಸ್‌, ಆಸ್ಟ್ರೇಲಿಯಾದ ಆಲ್‌ರೌಂಡರ್‌ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್ ಡೆಲ್ಲಿ ಅವರನ್ನು ಸೇರಿಸಿಕೊಂಡಿದೆ. ಬಿರುಸಿನ ಹೊಡೆತಗಳ ಆರಂಭ ಆಟಗಾರ ಮತ್ತು ಲೆಗ್‌ ಸ್ಪಿನ್ನರ್ ಆಗಿರುವ, 21 ವರ್ಷದ ಮೆಕ್‌ಗುರ್ಕ್‌ ಕಳೆದ ತಿಂಗಳಷ್ಟೇ ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮೀಸಲು ನಿಧಿಯಲ್ಲಿ ಅವರು ₹50 ಲಕ್ಷಕ್ಕೆ ಡೆಲ್ಲಿ ತಂಡ ಸೇರಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಭಾರತ ಪ್ರವಾಸದ ವೇಳೆ ಗಿಡಿ ಪಾದದ ನೋವಿಗೆ ಒಳಗಾಗಿದ್ದರು. ಎರಡು ವರ್ಷ ಐಪಿಎಲ್‌ ಆಡಿದ್ದ ಗಿಡಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.