: ಚೊಚ್ಚಲ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಬೇಕು 114 ರನ್ ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 114 ರನ್ ಗಳಿಸಬೇಕಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡದ ಬೌಲರ್‌ಗಳು ಪಾರಮ್ಯ ಮೆರೆದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡವು 18.3 ಓವರ್‌ಗಳಲ್ಲಿ 113 ರನ್‌ ಗಳಿಸಿತು. ಮೆಗ್‌ ಲ್ಯಾನಿಂಗ್ (23; 23ಎ, 4X3) ಮತ್ತು ಶಫಾಲಿ ವರ್ಮಾ (44; 27ಎ, 4X2, 6X3) ಅವರಿಬ್ಬರೂ ಡೆಲ್ಲಿ ತಂಡಕ್ಕೆ ಅಮೋಘ ಆರಂಭ ನೀಡಿದರು. ಅದರಿಂದಾಗಿ ಕೇವಳ ಏಳು ಓವರ್‌ಗಳಲ್ಲಿ ತಂಡವು ವಿಕೆಟ್ ನಷ್ಟವಿಲ್ಲದೇ 64 ರನ್ ಸೇರಿಸಿತ್ತು. ಆದರೆ ನಂತರದ 49 ರನ್‌ಗಳ ಅಂತರದಲ್ಲಿ ಎಲ್ಲ ವಿಕೆಟ್‌ಗಳನ್ನೂ ಕಳೆದುಕೊಂಡಿತು. ಸೋಫಿ, ಕನ್ನಡತಿ ಶ್ರೇಯಾಂಕ ಪಾಟೀಲ ಧಮಾಕ ಎಂಟನೇ ಓವರ್‌ನಲ್ಲಿ ಮೂರು ವಿಕೆಟ್ ಕಿತ್ತು ತಮ್ಮ ಖಾತೆಗೆ ಸೇರಿಸಿಕೊಂಡ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಸೋಫಿ (20ಕ್ಕೆ3) ಡೆಲ್ಲಿ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಸೋಫಿ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಶಫಾಲಿ ಅವರು ಜಾರ್ಜಿಯಾ ವೆರ್ಹಾಮ್‌ಗೆ ಕ್ಯಾಚಿತ್ತರು. ಡೆಲ್ಲಿ ತಂಡದ ಭರವಸೆಯ ಬ್ಯಾಟರ್ ಜೆಮಿಮಾ ರಾಡ್ರಿಗಸ್ ತಾವೆದುರಿಸಿದ ಎರಡನೇ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ನಂತರದ ಎಸೆತದಲ್ಲಿ ಅಲೈಸ್ ಕ್ಯಾಪ್ಸಿಯನ್ನೂ ಬೌಲ್ಡ್ ಮಾಡಿದ ಸೋಫಿ ಸಂಭ್ರಮಿಸಿದರು. ಇಬ್ಬರೂ ಪ್ರಮುಖ ಬ್ಯಾಟರ್‌ಗಳು ಖಾತೆ ತೆರೆಯದೇ ಮರಳಿದ್ದು ದೊಡ್ಡ ನಷ್ಟವಾಯಿತು. ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದ ರಾಧಾ ಯಾದವ್ (12; 9ಎ) ಅವರನ್ನು ತಮ್ಮ ಚುರುಕಾದ ಫೀಲ್ಡಿಂಗ್ ಮತ್ತು ನೇರ ಥ್ರೋ ಮೂಲಕ ರನೌಟ್ ಮಾಡಿದ ಸೋಫಿ ಮಾಲಿನೊ ಆರ್‌ಸಿಬಿಗೆ ಮತ್ತೊಂದು ಕಾಣಿಕೆ ನೀಡಿದರು. ಸೋಫಿ ಮಾಡಿದ ಗಾಯಕ್ಕೆ ಕರ್ನಾಟಕದ ಆಫ್‌ಸ್ಪಿನ್ನರ್ ಶ್ರೇಯಾಂಕ (3.3–0–12–4) ಉಪ್ಗು ಸವರಿದರು. ಆರಂಭಿಕ ಬ್ಯಾಟರ್ ಮೆಗ್ ಲ್ಯಾನಿಂಗ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. 15ನೇ ಓವರ್‌ನಲ್ಲಿ ಮಿನು ಮಣಿಗೂ ಡಗ್‌ಔಟ್ ಹಾದಿ ತೋರಿಸಿದರು. 19ನೇ ಓವರ್‌ನಲ್ಲಿ ಅರುಂಧತಿ ರೆಡ್ಡಿಯನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಅದೇ ಓವರ್‌ನಲ್ಲಿ ತಾನಿಯಾ ಭಾಟಿಯಾ ಅವರು ವಿಕೆಟ್‌ಕೀಪರ್‌ ರಿಚಾಗೆ ಕ್ಯಾಚ್ ಆದರು. ಲೆಗ್ ಸ್ಪಿನ್ನರ್ ಆಶಾ ಶೋಭನಾ (14ಕ್ಕೆ2) ಡೆಲ್ಲಿ ತಂಡದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ತಮ್ಮ ಒಂದೇ ಓವರ್‌ನಲ್ಲಿ ಮರಿಝಾನ್ ಕ್ಯಾಪ್ ಮತ್ತು ಜೆಸ್ ಯಾನ್ಸೆನ್ ವಿಕೆಟ್‌ಗಳನ್ನು ಉರುಳಿಸಿದರು. ವಿಕೆಟ್ ನಷ್ಟವಿಲ್ಲದೆ 64, 113ಕ್ಕೆ ಆಲೌಟ್... ಡೆಲ್ಲಿಗೆ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಶಫಾಲಿ ವರ್ಮಾ ಬಿರುಸಿನ ಆರಂಭವೊದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ ಏಳು ಓವರ್‌ಗಳಲ್ಲೇ 64 ರನ್ ಪೇರಿಸಿತು. ಆಕ್ರಮಣಕಾರಿಯಾಗಿ ಆಡಿದ ಶಫಾಲಿ ಕೇವಲ 27 ಎಸೆತಗಳಲ್ಲಿ 44 ರನ್ ಗಳಿಸಿದರು. ಇದರಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ಒಳಗೊಂಡಿತ್ತು. ಮತ್ತೊಂದೆಡೆ ನಾಯಕಿ ಮೆಗ್ ಲ್ಯಾನಿಂಗ್ ಎಸೆತಕ್ಕೆ ಒಂದರಂತೆ ಮೂರು ಬೌಂಡರಿಗಳ ನೆರವಿನಿಂದ 23 ರನ್ ಗಳಿಸಿದರು. ಒಂದೇ ಓವರ್‌ನಲ್ಲಿ ಮೂರು ವಿಕೆಟ್... ಈ ಹಂತದಲ್ಲಿ ದಾಳಿಗೆ ಇಳಿದ ಸೋಫಿ ಮಾಲಿನೆ ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಎಂಟನೇ ಓವರ್‌ನಲ್ಲಿ ಶಫಾಲಿ ವರ್ಮಾ (44), ಜೆಮಿಮಾ ರಾಡ್ರಿಗಸ್ (0) ಹಾಗೂ ಅಲೈಸ್ ಕ್ಯಾಪ್ಸಿ (0) ವಿಕೆಟ್‌ಗಳನ್ನು ಕಬಳಿಸಿದರು. ಈ ಪೈಕಿ ಜೆಮಿಮಾ ಹಾಗೂ ಕ್ಯಾಪ್ಸಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ✅ ✅ ✅ 3⃣- 👏 👏 🎥 🔽 ▶️ ://./g011cfzcFp # | # | # | @ ../a6gKyIFhtw ! @! 👌 👌 4⃣ @shreyanka_patil 3⃣ 2⃣ @ ? 🤔 ⌛️ ▶://./g011cfzcFp# | # | # ../xl1YFMHVHA ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್... ಈ ಮೊದಲು ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್‌ ಲ್ಯಾನಿಂಗ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶಿಸಿರುವ ಆರ್‌ಸಿಬಿ, ಪ್ರಶಸ್ತಿ ಜಯದ ಕನಸು ಕಾಣುತ್ತಿದೆ. ಸ್ಮೃತಿ ಮಂದಾನ ಬಳಗವು ಪ್ಲೇ-ಆಫ್‌ನ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಮಂದಾನ ಬಳಗವು ಡೆಲ್ಲಿಗೆ ಮಣಿದಿತ್ತು. 🚨 🚨 🆙 . ▶️ ://./g011cfzcFp# | # | # | @ | @ ../x2SIiHhc0z 2023ರಲ್ಲಿ ಏನಾಗಿತ್ತು? ಕಳೆದ ವರ್ಷ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ್ದ ಮುಂಬೈ ಚಾಂಪಿಯನ್ಸ್, ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಈಗ ಸತತ ಎರಡನೇ ಬಾರಿಗೆ ಡೆಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕಳೆದ ವರ್ಷ ಆರ್‌ಸಿಬಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಪುರುಷರಿಗಿಂತ ಮೊದಲು ವನಿತೆಯರಿಗೇ ಪ್ರಶಸ್ತಿ? ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಳೆದ 17 ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಮೂರು ಬಾರಿ ಫೈನಲ್ ತಲುಪಿದರೂ ಗೆದ್ದಿರಲಿಲ್ಲ. ಆದರೆ ಇದೀಗ ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಮಹಿಳೆಯರ ಆರ್‌ಸಿಬಿ ತಂಡವು ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿ ಗೆಲ್ಲಬಹುದೇ ಎಂಬ ಕುತೂಹಲ ಮೂಡಿದೆ. ⏳ @ @ ‼️ ⏰ 7:30 💻 ://./jP2vYAWukG 📱 # | # | # ../ya4mngpOTy ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.