ಪ್ರಜಾವಾಣಿಗೆ ಟಿಪ್‌ಸ್ಟರ್‌ ಟ್ರೋಫಿ ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆಗೆ ಬೆಂಗಳೂರು ಟರ್ಫ್‌ ಕ್ಲಬ್‌ನ (ಬಿಟಿಸಿ) ಟಿಪ್‌ಸ್ಟರ್‌ ಟ್ಯಾಲಿ ಟ್ರೋಫಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿತು. ಬೆಂಗಳೂರಿನ 2023-24 ಸಾಲಿನ ಚಳಿಗಾಲದ ರೇಸ್‌ಗಳಲ್ಲಿ ಬಿಟಿಸಿಯು ದಿನಪತ್ರಿಕೆ ವಿಭಾಗದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಜಾವಾಣಿ ಮೊದಲ ಸ್ಥಾನ ಗಳಿಸಿತು. 24ನೇ ಬಾರಿ ಈ ಪ್ರಶಸ್ತಿಯು ಪತ್ರಿಕೆಗೆ ಸಂದಿದೆ. ಚಳಿಗಾಲದ ಅವಧಿಯ 22 ದಿನಗಳಲ್ಲಿ ನಡೆದ 169 ರೇಸ್‌ಗಳಲ್ಲಿ, ರೇಸ್‌ ಪ್ರತಿನಿಧಿ ಡಿ.ರವಿಕುಮಾರ್‌ 69 ವಿಜಯೀ ಕುದುರೆಗಳನ್ನು ಗುರುತಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.