2024: ಮುಂಬೈ ವಿರುದ್ಧ ರೋಚಕ ಗೆಲುವು: ಆರ್‌ಸಿಬಿ ಫೈನಲ್‌ಗೆ ಲಗ್ಗೆ ನವದೆಹಲಿ: ಕೊನೆಯ ಕೆಲವು ಓವರುಗಳನ್ನು ಬಿಗುವಾಗಿ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಹಿಳಾ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದ ಮೇಲೆ ಶುಕ್ರವಾರ ಐದು ರನ್‌ಗಳ ರೋಚಕ ಜಯ ಪಡೆದು ಮೊದಲ ಸಲ ಫೈನಲ್ ತಲುಪಿತು. ಆಲ್‌ರೌಂಡರ್ ಎಲಿಸ್‌ ಪೆರಿ (66 ಮತ್ತು 29ಕ್ಕೆ1) ಮತ್ತೊಮ್ಮೆ ಇದೇ ಎದುರಾಳಿಯ ವಿರುದ್ಧ ಗಮನಸೆಳೆದರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 136 ರನ್‌ಗಳ ಗುರಿ ಎದುರಿಸಿದ್ದ ಮುಂಬೈ ಕೊನೆಯ ಮೂರು ಓವರ್‌ಗಳಿದ್ದಾಗ 3 ವಿಕೆಟ್‌ಗೆ 115 ರನ್ ಗಳಿಸಿದ್ದು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಕನ್ನಡತಿ ಶ್ರೇಯಾಂಕ ಪಾಟೀಲ ಮತ್ತು ಸೋಫಿ ಮೊಲಿನೆಕ್ಸ್‌‌ ಕ್ರಮವಾಗಿ 18 ಮತ್ತು 19ನೇ ಓವರ್‌ನಲ್ಲಿ ತಲಾ ನಾಲ್ಕು ರನ್ ಮಾತ್ರ ನೀಡಿ ಒಂದೊಂದು ವಿಕೆಟ್‌ ಪಡೆದು ಎದುರಾಳಿ ಮೇಲೆ ಒತ್ತಡ ಹೇರಿದ್ದರು. ಶ್ರೇಯಾಂಕ ಎದುರಾಳಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ (33) ವಿಕೆಟ್‌ ಕೂಡ ಪಡೆದು ಹೊಡೆತ ನೀಡಿದ್ದರು. ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಆದರೆ ಆಶಾ ಶೋಭನಾ ಬರೇ ಆರು ರನ್ ಮಾತ್ರ ನೀಡಿ ಪೂಜಾ ವಸ್ತ್ರಕಾರ್ ವಿಕೆಟ್‌ ಪಡೆದರು. ✅@ @ 🏆# | # | # ../R0YL3bE9EP ಅಮೇಲಿಯಾ ಕೆರ್‌ ಔಟಾಗದೇ 27 ರನ್ ಗಳಿಸಿದರು. ಉಳಿದಂತೆ ಯಾರೂ ಪ್ರತಿರೋಧ ತೋರಲಿಲ್ಲ. ಆರ್‌ಸಿಬಿ ತಂಡ ಭಾನುವಾರ (ಮಾ. 17) ನಡೆಯುವ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಇದಕ್ಕೆ ಮೊದಲು ಟಾಸ್‌ ಗೆದ್ದು ಬ್ಯಾಟ್‌ ಮಾಡಿದ್ದ ಬೆಂಗಳೂರು ತಂಡಕ್ಕೆ ಎಲಿಸ್‌ ಪೆರಿ ಮತ್ತೊಮ್ಮೆ ಅರ್ಧಶತಕದ ಮೂಲಕ ಆಸರೆಯಾದರು. ಅವರ 66 ರನ್‌ಗಳನ್ನು (50 ಎಸೆತ, 4x8, 1X6) ಬಿಟ್ಟರೆ ಉಳಿದವರಿಂದ ಉಪಯುಕ್ತ ಆಟ ಬರಲಿಲ್ಲ. ಮುಂಬೈ ಬೌಲರ್‌ಗಳು ಶಿಸ್ತುಬದ್ಧ ದಾಳಿಯಿಂದ ಬೆಂಗಳೂರು ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. 𝗠𝗮𝗶𝗱𝗲𝗻 #𝗧𝗔𝗧𝗔𝗪𝗣𝗟 𝗙𝗶𝗻𝗮𝗹 𝗳𝗼𝗿 𝗥𝗖𝗕 👏@ 5- # 📍🤝 @ 17th ! ⌛️ ▶️://./# | # ../0t2hZeGXNj ಆಫ್‌ಬ್ರೇಕ್‌ ಬೌಲರ್ ಹೇಯ್ಲಿ ಮ್ಯಾಥ್ಯೂಸ್‌ (4 ಓವರುಗಳಲ್ಲಿ 18ಕ್ಕೆ2) ಮೊದಲ ಓವರ್‌ನಲ್ಲೇ ಅನುಭವಿ ಸೋಫಿ ಡಿವೈನ್ ಅವರ ವಿಕೆಟ್‌ ಪಡೆದರು. ಮೂರನೇ ಓವರ್‌ನಲ್ಲಿ ನಾಯಕಿ ಮಂದಾನ ಆಕ್ರಮಣದ ಆಟಕ್ಕೆ ಮುಂದಾಗಿ, ಶಿವರ್‌ ಬ್ರಂಟ್‌ ಬೌಲಿಂಗ್‌ನಲ್ಲಿ ಡೀಪ್‌ ಕವರ್‌ನಲ್ಲಿ ಕ್ಯಾಚಿತ್ತರು. ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ, ಇನ್ನೊಂದೆಡೆ ಪೆರಿ ಅವರು ಉತ್ತಮ ಲಯದಲ್ಲೇ ಆಡಿದರು. ಎಂಟು ಸೊಗಸಾದ ಬೌಂಡರಿಗಳನ್ನು ಬಾರಿಸಿದ ಅವರು, ಶಬ್ನಿಮ್‌ ಇಸ್ಮಾಯಿಲ್ ಎಸೆತದಲ್ಲಿ ಪಾಯಿಂಟ್ ಮತ್ತು ಶಾರ್ಟ್‌ಥರ್ಡ್ ಮ್ಯಾನ್ ನಡುವಿನಿಂದ ಬಾರಿಸಿದ ಲೇಟ್‌ ಕಟ್‌ ಬೌಂಡರಿ ಆಕರ್ಷಕವಾಗಿತ್ತು. ಕೊನೆಯಲ್ಲಿ ಜಾರ್ಜಿಯಾ ವೇರ್‌ಹ್ಯಾಮ್ (ಔಟಾಗದೇ 18, 10 ಎಸೆತ) ರನ್‌ ಗಳಿಕೆಗೆ ಕೊಂಚ ವೇಗ ನೀಡಿದರು. ಸ್ಕೋರುಗಳು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರುಗಳಲ್ಲಿ 6 ವಿಕೆಟ್‌ಗೆ 135 (ಎಲ್ಲಿಸ್ ಪೆರಿ 66, ಜಾರ್ಜಿಯಾ ವೇರ್‌ಹ್ಯಾಮ್ ಔಟಾಗದೇ 18; ಹೇಯ್ಲಿ ಮ್ಯಾಥ್ಯೂಸ್ 18ಕ್ಕೆ2, ನಾಟ್‌ ಶಿವರ್ ಬ್ರಂಟ್‌ 18ಕ್ಕೆ2, ಸೈಕಾ ಇಶಾಖ್ 27ಕ್ಕೆ2); ಮುಂಬೈ ಇಂಡಿಯನ್ಸ್: 20 ಓವರುಗಳಲ್ಲಿ 6 ವಿಕೆಟ್‌ಗೆ 130 (ನಾಟ್‌ ಶಿವರ್ ಬ್ರಂಟ್ 23, ಹರ್ಮನ್‌ಪ್ರೀತ್ ಕೌರ್‌ 33, ಅಮೇಲಿಯಾ ಕೆರ್‌ ಔಟಾಗದೇ 23; ಶ್ರೇಯಾಂಕ ಪಾಟೀಲ 16ಕ್ಕೆ2, ಪೆರಿ 29ಕ್ಕೆ1). ಪಂದ್ಯದ ಆಟಗಾರ್ತಿ: ಎಲ್ಲಿಸ್‌ ಪೆರಿ ! @ 👏 👏@shreyanka_patil 2⃣ 👍 👍# ! ▶️ ://./ # | # | # ../AgESUuoFa5 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.