ಐಪಿಎಲ್: ಸಂಕೇತ ಭಾಷೆ ‘ಕಾಮೆಂಟ್ರಿ’ ಮುಂಬೈ: ಈ ಸಲ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳ ನೇರಪ್ರಸಾರದಲ್ಲಿ ಈಗ ಸಂಕೇತ ಭಾಷೆ ಮತ್ತು ವಿವರಣೆ ನೀಡಲಾಗುವುದು. ‌ ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯು ಇಂಡಿಯಾ ಸೈನಿಂಗ್ ಹ್ಯಾಂಡ್ಸ್‌ (ಐಎಸ್‌ಎಚ್ ನ್ಯೂಸ್) ಜೊತೆಗೂಡಿ ಈ ಸಂಕೇಶ ಭಾಷೆಯ ’ಕಾಮೆಂಟ್ರಿ’ ನೀಡಲಿದೆ. ‘ಸಂಕೇತ ಭಾಷೆಯ ಮೂಲಕ ಶ್ರವಣ ದೋಷ ಮತ್ತು ಅಡಿಯೊ ಕಾಮೆಂಟ್ರಿಯಿಂದ ದೃಷ್ಟಿದೋಷವುಳ್ಳವರಿಗಾಗಿ ಪಂದ್ಯದ ವಿವರಣೆ ಅರಿಯಲು ಸಾಧ್ಯವಾಗಲಿದೆ’ ಎಂದು ಅಧಿಕೃತ ಪ್ರಸಾರಕ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.