ಕೊಹ್ಲಿಗೆ ನನ್ನ ಹೆಸರು ಗೊತ್ತು: ಫೋಟೊ ಹಂಚಿಕೊಂಡು ಸಂಭ್ರಮಿಸಿದ ಕನ್ನಡತಿ ಶ್ರೇಯಾಂಕ ಭಾನುವಾರವಷ್ಟೇ (ಮಾರ್ಚ್‌ 17ರಂದು) ಮುಕ್ತಾಯವಾದ ಮಹಿಳೆಯರ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಟೂರ್ನಿಯ 'ಪರ್ಪಲ್ ಕ್ಯಾಪ್‌' ಜೊತೆಗೆ, 'ಎಮರ್ಜಿಂಗ್‌ ಪ್ಲೆಯರ್‌' ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಕನ್ನಡತಿ ಶ್ರೇಯಾಂಕ ಪಾಟೀಲ, ಆರ್‌ಸಿಬಿ 'ಕಪ್‌' ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದೀಗ ಅವರು ಆರ್‌ಸಿಬಿಯ 'ಕಾಯಂ ಆಟಗಾರ' ಮತ್ತು ಕ್ರಿಕೆಟ್‌ ಲೋಕದ 'ರನ್‌ ಮಷಿನ್‌' ವಿರಾಟ್‌ ಕೊಹ್ಲಿ ಅವರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಅನ್‌ ಬಾಕ್ಸ್‌ ಕಾರ್ಯಕ್ರಮದಲ್ಲಿ ಕೊಹ್ಲಿಯನ್ನು ಶ್ರೇಯಾಂಕ ಭೇಟಿಯಾಗಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಕನ್ನಡತಿ, 'ಅವರ (ಕೊಹ್ಲಿ) ಕಾರಣದಿಂದಲೇ ಕ್ರಿಕೆಟ್‌ ನೋಡಲು ಶುರು ಮಾಡಿದೆ. ಅವರಂತಾಬೇಕು ಎಂಬ ಕನಸಿನೊಂದಿಗೆ ಬೆಳೆದೆ. ಕಳೆದ ರಾತ್ರಿ ನನ್ನ ಜೀವನದ ಅತ್ಯಮೂಲ್ಯ ಘಟನೆ ನಡೆಯಿತು' ಎಂದು ಹೇಳಿಕೊಂಡಿದ್ದಾರೆ. ಈಗಲೂ ನಾನು ಕೊಹ್ಲಿ ಅಭಿಮಾನಿ ಎನ್ನುತ್ತಾ # ಟ್ಯಾಗ್‌ ಬಳಸಿರುವ ಅವರು, 'ಹಾಯ್ ಶ್ರೇಯಾಂಕ, ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದು ಕೊಹ್ಲಿ ಹೇಳಿದರು. ಅವರಿಗೆ ನನ್ನ ಹೆಸರು ಗೊತ್ತು' ಎಂದು ಬರೆದು ಸಂಭ್ರಮಿಸಿದ್ದಾರೆ. ಟೂರ್ನಿಯ 8 ಪಂದ್ಯಗಳಲ್ಲಷ್ಟೇ ಆಡುವ ಅವಕಾಶ ಗಿಟ್ಟಿಸಿದ 21 ವರ್ಷದ ಶ್ರೇಯಾಂಕ, 13 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡರು. . . , . , “ , .” 😬😬😬# # ../z3DB0C8Pt0 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.