ಲಂಕಾ ವಿರುದ್ಧ ತಂಡಕ್ಕೆ ಸಂಸದ ಶಕೀಬ್‌ ಢಾಕ್ಕಾ: ಬಾಂಗ್ಲಾ ದೇಶದ ನೂತನ ಸಂಸತ್‌ ಸದಸ್ಯರಾಗಿರುವ ಶಕೀಬ್ ಅಲ್ ಹಸನ್ ಅವರನ್ನು ಶ್ರೀಲಂಕಾ ವಿರುದ್ಧ ಎರಡನೇ ಕ್ರಿಕೆಟ್‌ ಟೆಸ್ಟ್ ಆಡಲಿರುವ 15 ಆಟಗಾರರ ಬಾಂಗ್ಲಾದೇಶ ತಂಡಕ್ಕೆ ಮಂಗಳವಾರ ಆಯ್ಕೆ ಮಾಡಲಾಗಿದೆ. ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಶಕೀಬ್ ಕಳೆದ ಜನವರಿಯಲ್ಲಿ ಅವಾಮಿ ಲೀಗ್‌ನಿಂದ ಸ್ಪರ್ಧಿಸಿ ಮಗುರಾ ಕ್ಷೇತ್ರದಿಂದ ಜಯಗಳಿಸಿದ್ದರು. ಕಳೆದ ವರ್ಷದ ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ ಆಡಿದ್ದ ನಂತರ ಶಕೀಬ್ ಸ್ಪರ್ಧಾತ್ಮಕ ಕ್ರಿಕೆಟ್‌ ಆಡಿರಲಿಲ್ಲ. 2023ರಲ್ಲಿ ಐರ್ಲೆಂಡ್ ವಿರುದ್ಧ ಕೊನೆಯ ಸಲ ಟೆಸ್ಟ್‌ ಆಡಿದ್ದರು. ಸಿಲ್ಹೆಟ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ಶ್ರೀಲಂಕಾ ತಂಡ 328 ರನ್‌ಗಳ ರನ್‌ಗಳಿಂದ ನಜ್ಮುಲ್ ಹುಸೇನ್ ಶಾಂತೊ ಬಳಗ ಮೇಲೆ ಜಯಗಳಿಸಿತ್ತು. ಎರಡೂ ಇನಿಂಗ್ಸ್‌ಗಳಲ್ಲಿ 200ರ ಒಳಗೆ ಆಲೌಟ್‌ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.