2024 | ಹೆಚ್ಚು ಸಿಕ್ಸರ್‌: ಗೇಲ್ ದಾಖಲೆ ಮುರಿದ ಕೊಹ್ಲಿ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ 7 ವಿಕೆಟ್‌ಗಳ ಜಯ ದಾಖಲಿಸಿತು. ಸುನಿಲ್‌ 500ನೇ ಪಂದ್ಯ: ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸುನಿಲ್ ನಾರಾಯಣ್ ಅವರು 500 ಪಂದ್ಯಗಳನ್ನಾಡಿದ ಸಾಧನೆ ಮಾಡಿದರು. ಅಂತರರಾಷ್ಟ್ರೀಯ, ದೇಶಿ ಮತ್ತು ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಅವರು ಆಡಿದ್ದಾರೆ. ಅವರದ್ದೇ ದೇಶದ ಕೀರನ್ ಪೊಲಾರ್ಡ್ (660) ಮೊದಲ ಸ್ಥಾನದಲ್ಲಿದ್ಧಾರೆ. ಗೌತಿ–ವಿರಾಟ್ ಭೇಟಿ: ಇನಿಂಗ್ಸ್‌ನ ಎರಡನೇ ಸ್ಟ್ರ್ಯಾಜಿಕ್ ಟೈಮ್‌ಔಟ್‌ ಸಂದರ್ಭ ದಲ್ಲಿ ಮೈದಾನದೊಳಕ್ಕೆ ಬಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಅವರೊಂದಿಗೆ ವಿರಾಟ್ ಕೊಹ್ಲಿ ಮಾತನಾಡಿದರು. ಇಬ್ಬರು ಪರಸ್ಪರ ಆಲಂಗಿಸಿಕೊಂಡು ನಗುನಗುತ್ತ ಮಾತುಕತೆ ನಡೆಸಿದರು. ಹೋದ ಬಾರಿಯ ಐಪಿಎಲ್‌ನಲ್ಲಿ ಅವರಿಬ್ಬರ ನಡುವೆ ಪಂದ್ಯವೊಂದರಲ್ಲಿ ಮಾತಿನ ಚಕಮಕಿಯಾಗಿದ್ದು ಸುದ್ದಿಯಾಗಿತ್ತು. ಮಿಚೆಲ್ ಸ್ಟಾರ್ಕ್‌ ದುಬಾರಿ: ಕೆಕೆಆರ್‌ ತಂಡದ ಮಿಚೆಲ್ ಸ್ಟಾರ್ಕ್ ಮತ್ತೊಮ್ಮೆ ದುಬಾರಿಯಾದರು. ಈ ಬಾರಿಯ ಬಿಡ್‌ನಲ್ಲಿ ₹24.75 ಕೋಟಿ ಮೌಲ್ಯ ಪಡೆದಿದ್ದರು. ಆದರೆ, ಆಡಿದ ಎರಡೂ ಪಂದ್ಯಗಳಲ್ಲಿ 8 ಓವರ್‌ ಹಾಕಿ 100 ರನ್‌ ಬಿಟ್ಟುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ತಮ್ಮ ಎರಡನೇ ಓವರ್‌ನಲ್ಲಿ 17 ರನ್‌ ಕೊಟ್ಟರು. ಒಟ್ಟು 4 ಓವರ್‌ಗಳಲ್ಲಿ 47 ರನ್‌ ಬಿಟ್ಟುಕೊಟ್ಟರು. ವಿಕೆಟ್ ಗಳಿಸಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.