ನಿಸಾಂಕ ಶತಕ: ಇಂಗ್ಲೆಂಡ್ ವಿರುದ್ಧ ಲಂಕಾಗೆ ಐತಿಹಾಸಿಕ ಜಯ ಲಂಡನ್: ಪಥುಮ್ ನಿಸಾಂಕ ಅವರ ಅಜೇಯ ಶತಕದ ಬಲದಿಂದ ಶ್ರೀಲಂಕಾ ತಂಡವು ದ ಓವಲ್‌ನಲ್ಲಿ ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿತು. ಶ್ರೀಲಂಕಾ ತಂಡಕ್ಕೆ ಆತಿಥೇಯ ಇಂಗ್ಲೆಂಡ್ ತಂಡವು 219 ರನ್‌ಗಳ ಗುರಿಯೊಡ್ಡಿತ್ತು. ನಿಸಾಂಕ (ಔಟಾಗದೆ 127, 124ಎ) ಅವರ ಆಟದ ಬಲದಿಂದ ತಂಡವು 40.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 219 ರನ್‌ ಗಳಿಸಿತು. ನಿಸಾಂಕ 13 ಬೌಂಡರಿ ಮತ್ತು 2 ಸಿಕ್ಸರ್ ಗಳಿಸಿದರು. ಇಂಗ್ಲೆಂಡ್‌ ನೆಲದಲ್ಲಿ ಶ್ರೀಲಂಕಾ ತಂಡವು ಗೆದ್ದ ನಾಲ್ಕನೇ ಟೆಸ್ಟ್ ಇದಾಗಿದೆ. 2014ರಲ್ಲಿ ಹೆಡಿಂಗ್ಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಲಂಕಾ ತಂಡವು ಜಯಿಸಿತ್ತು. ಅದರ ನಂತರ ಈಗ ಜಯದ ಸಾಧನೆ ಮಾಡಿದೆ. ಈ ಸರಣಿಯಲ್ಲಿ ಇಂಗ್ಲೆಂಡ್ ಮೊದಲೆರಡು ಪಂದ್ಯಗಳನ್ನು ಜಯಿಸಿದೆ. ಸಂಕ್ಷಿಪ್ತ ಸ್ಕೋರು ಮೊದಲ ಇನಿಂಗ್ಸ್: ಇಂಗ್ಲೆಂಡ್: 69.1 ಓವರ್‌ಗಳಲ್ಲಿ 325. ಶ್ರೀಲಂಕಾ: 263 ಎರಡನೇ ಇನಿಂಗ್ಸ್: ಇಂಗ್ಲೆಂಡ್: 156. ಶ್ರೀಲಂಕಾ: 40.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 219 (ಪಥುಮ್ ನಿಸಾಂಕ ಔಟಾಗದೆ 127, ಕುಶಾಲ ಮೆಂಡಿಸ್ 39, ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 32, ಕ್ರಿಸ್ ವೋಕ್ಸ್ 52ಕ್ಕೆ1, ಗಸ್ ಅಟ್ಕಿನ್ಸನ್ 44ಕ್ಕೆ1) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.