ಬ್ಯಾಸ್ಕೆಟ್‌ಬಾಲ್: ಭಾರತಕ್ಕೆ ನಿರಾಸೆ ಬೆಂಗಳೂರು: ಕೊನೆಯವರೆಗೂ ರೋಚಕತೆ ಉಳಿಸಿಕೊಂಡ ಪಂದ್ಯದಲ್ಲಿ ಇಂಡೊನೇಷ್ಯಾ ಎದುರು ಎಡವಿದ ಭಾರತ ತಂಡವು 18 ವರ್ಷದೊಳಗಿನವರ ಮಹಿಳಾ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಎ ಡಿವಿಷನ್‌ನಲ್ಲಿ ಎಂಟನೇ ಸ್ಥಾನ ಗಳಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರ ವಾರ ನಡೆದ ಹಣಾಹಣಿಯಲ್ಲಿ ಭಾರತ 45–48ರಿಂದ ನಿರಾಸೆ ಅನು ಭವಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಇಂಡೊ ನೇಷ್ಯಾ ಆಟಗಾರ್ತಿಯರು 15–5ರಿಂದ ಮುನ್ನಡೆ ಗಳಿಸಿದ್ದರು. ಆದರೆ ಎರಡನೇ ಕ್ವಾರ್ಟರ್‌ ಅಂತ್ಯದ ವೇಳೆಗೆ ಭಾರತ 27–22ರ ಮೇಲುಗೈ ಗಳಿಸಿತು. 3ನೇ ಕ್ವಾರ್ಟರ್‌ನಲ್ಲೂ 41–38ರಿಂದ ಮುನ್ನಡೆ ಉಳಿಸಿಕೊಂಡಿತು. ಕೊನೆಯ ಕ್ವಾರ್ಟರ್‌ನಲ್ಲಿ ಪಂದ್ಯ 45–45ರಿಂದ ಸಮಬಲವಾಗಿದ್ದ ವೇಳೆ ಕೇವಲ 2 ಸೆಕೆಂಡು ಉಳಿದಿತ್ತು. ಈ ಹಂತದಲ್ಲಿ ಚುರುಕಿನ ಆಟವಾಡಿದ ಇಂಡೊನೇಷ್ಯಾ, ಜಯ ಕಸಿಯಿತು.ಇನ್ನೊಂದು ಪಂದ್ಯದಲ್ಲಿ ಚೀನಾ ತೈಪೆ 77–67ರಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.