ಫಾರ್ಮುಲಾ 2: ಜೆಹಾನ್‌ಗೆ ಮೂರನೇ ಸ್ಥಾನ ಮೊಂಜಾ, ಇಟಲಿ: ಭಾರತದ ಜೆಹಾನ್ ದಾರುವಾಲಾ ಅವರು ಇಲ್ಲಿ ನಡೆದ ಫಾರ್ಮುಲಾ 2 ಸ್ಪ್ರಿಂಟ್‌ ರೇಸ್‌ನಲ್ಲಿ ಮೂರನೇ ಸ್ಥಾನ ಗಳಿಸಿದರು. ಐದನೇ ಸಾಲಿನಿಂದ ರೇಸ್ ಆರಂಭಿಸಿದ 23 ವರ್ಷದ ಜೆಹಾನ್‌, ಅಗ್ರಸ್ಥಾನ ಗಳಿಸಿದ ಈಸ್ಟೋನಿಯಾದ ಜೂರಿ ವಿಪ್ಸ್ ಮತ್ತು ಡೆನ್ಮಾರ್ಕ್‌ನ ಫ್ರೆಡರಿಕ್‌ ವೆಸ್ಟಿ (ಎರಡನೇ ಸ್ಥಾನ) ನಂತರದ ಸ್ಥಾನ ಪಡೆದರು. ಪ್ರೆಮಾ ರೇಸಿಂಗ್‌ ತಂಡದ ಜೆಹಾನ್‌ ಅವರಿಗೆ ಈ ಋತುವಿನಲ್ಲಿ ಇದು ಮೂರನೇ ‘ಪೋಡಿಯಂ ಫಿನಿಶ್’ ಆಗಿದೆ. ಮೊಂಜಾದಲ್ಲಿ ಐದನೇಯದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.