ಓಟದ ಸ್ಪರ್ಧೆ: ರಾಕೇಶ್‌, ಮೀನಾಗೆ ಅಗ್ರಸ್ಥಾನ ಬೆಂಗಳೂರು: ರಾಕೇಶ್ ಮತ್ತು ಮೀನಾ ಎಂ. ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ, ಸರ್ವಜ್ಞನಗರ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಕನ್ನಡ ಜಾಗೃತಿ ಓಟ‘ ಸ್ಪರ್ಧೆಯಲ್ಲಿ ಅಗ್ರಸ್ಥಾನ ಗಳಿಸಿದರು. ಪುರುಷರ ಸೀನಿಯರ್ಸ್ ವಿಭಾಗದಲ್ಲಿ ರಾಕೇಶ್, ಸೋಹಿತ್ ಶಿವರಾಜ್‌, ಗೌತಮ್ ಎಸ್‌ ಮೊದಲ ಮೂರು ಸ್ಥಾನ ಗಳಿಸಿದರು. ಜೂನಿಯರ್ ವಿಭಾಗದಲ್ಲಿ ಶರಭಾನು, ಮನೋಜ್, ನಿಖಿಲ್ ವರ್ಮಾ, ಬಾಲಕಿಯರ ಸೀನಿಯರ್ಸ್ ವಿಭಾಗದಲ್ಲಿ ಮೀನಾ ಎಂ, ಎಂಜಲ್ ಎಲಿಜಬೆತ್‌, ಅರ್ಚನಾ ಶ್ರೀನಿವಾಸ್‌, ಜೂನಿಯರ್ ವಿಭಾಗದಲ್ಲಿ ಎರ್ತಾ, ಸೋಫಿಯಾ ಮತ್ತು ಮಾಧುರಿ ಮೊದಲ ಮೂರು ಸ್ಥಾನ ಗಳಿಸಿದರು. ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ, ರಾಜ್ಯಸಭಾ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ಲಹರಿ ವೇಲು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಒಕ್ಕೂಟದ ಅಧ್ಯಕ್ಷ ಕೆಸಿ ಜಗನ್ನಾಥ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎನ್.ಮುನಿರಾಜು ಮತ್ತು ಸಂಯೋಜಕ ಎನ್. ರವಿಶಂಕರ್ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.