ಟೆನ್‌ಪಿನ್‌: ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಇಂದಿನಿಂದ ಬೆಂಗಳೂರು: ಭಾರತ ಟೆನ್‌ಪಿನ್‌ ಬೌಲಿಂಗ್‌ ಫೆಡರೇಷನ್‌ ಆಶ್ರಯದಲ್ಲಿ ‌‌ಸೆ. 5 ರಿಂದ 10ರ ವರೆಗೆ ನಗರದಲ್ಲಿ 31ನೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸಲಾಗಿದೆ. ಚರ್ಚ್‌ಸ್ಟ್ರೀಟ್‌ನಲ್ಲಿರುವ ಅಮೀಬಾ ಬೌಲಿಂಗ್‌ ಸೆಂಟರ್‌ನಲ್ಲಿ ನಡೆಯುವ ಟೂರ್ನಿಯಲ್ಲಿ 14 ರಾಜ್ಯಗಳ 146 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಪುರುಷರ ವಿಭಾಗದಲ್ಲಿ 118 ಹಾಗೂ ಮಹಿಳೆಯರ ವಿಭಾಗದಲ್ಲಿ 28 ಮಂದಿ ಕಣದಲ್ಲಿದ್ದಾರೆ. ಹಾಲಿ ಚಾಂಪಿಯನ್‌ ಆಗಿರುವ ಕರ್ನಾಟಕದ ಆಕಾಶ್‌ ಅಶೋಕ್‌ ಕುಮಾರ್‌, ಶಬ್ಬೀರ್‌ ಧನ್ಕೋಟ್‌ (ತಮಿಳುನಾಡು), ಧ್ರುವ್‌ ಸರ್ದಾ (ದೆಹಲಿ), ಎಸ್‌.ಎ.ಹಮೀದ್‌ (ದೆಹಲಿ) ಮತ್ತು ಸ್ಥಳೀಯ ಪ್ರತಿಭೆ ಆರ್‌.ಕಿಶನ್‌ ಅವರು ಪುರುಷರ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖರಾಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ 11 ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ತಮಿಳುನಾಡಿನ ಸಬೀನಾ ಅತೀಕಾ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ಧಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.