ರೇಸ್‌: ಅರ್ಜುನ್‌ ಮೈನಿಗೆ ಎರಡನೇ ಸ್ಥಾನ ಹಾಕೆನೀಮ್‌, ಜರ್ಮನಿ: ಭಾರತದ ಅರ್ಜುನ್‌ ಮೈನಿ ಅವರು ಇಲ್ಲಿ ನಡೆದ ಫನಾಟೆಕ್‌ ಜಿಟಿ ವಿಶ್ವ ಚಾಲೆಂಜ್‌ ಯೂರೋಪ್ ಟೂರ್ನಿಯಗೋಲ್ಡ್ ಕ್ಲಾಸ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದರು. ಮರ್ಸಿಡಿಸ್‌ –ಎಎಂಜಿ ಪ್ರತಿನಿಧಿಸುವ ಬೆಂಗಳೂರು ಮೂಲದ ಕಾರು ರೇಸರ್‌ ಅರ್ಜುನ್‌, ಹ್ಯೂಬರ್ಟ್‌ ಹಾಪ್ಟ್‌ ಮತ್ತು ಫ್ಲೋರಿನಾ ಸೊಲ್ಜ್‌ ಅವರನ್ನೊಳಗೊಂಡ ಎಚ್‌ಆರ್‌ಟಿ ತಂಡವು ‘ಪೋಡಿಯಂ ಫಿನಿಶ್’ ಮಾಡಿತು. ರೇಸ್‌ನಲ್ಲಿ ರಕ್ಷಣಾ ಕಾರುಗಳಿಂದ ಹಲವು ಬಾರಿ ಅಡೆತಡೆಗಳು ಉಂಟಾದವು. ಇದರಿಂದಾಗಿ ಒಂದು ಹಂತದಲ್ಲಿ ಅರ್ಜುನ್ ಅವರಿದ್ದ ಕಾರು, ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಹಿಂದುಳಿಯಿತು. ಅರ್ಜುನ್ ಅವರ ತಂಡವು ಸದ್ಯ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟಾರೆ ನಾಲ್ಕನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.