ಎಫ್‌ಐಎಚ್‌ ನೇಷನ್ಸ್ ಕಪ್ ಮಹಿಳಾ ಹಾಕಿ: ಭಾರತಕ್ಕೆ ಕೆನಡಾ ಮೊದಲ ಎದುರಾಳಿ ಲಾಸನ್‌: ಭಾರತ ಮಹಿಳಾ ಹಾಕಿ ತಂಡವು ಎಫ್ಐಎಚ್‌ ನೇಷನ್ಸ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ಸವಾಲು ಎದುರಿಸಲಿದೆ. ಸ್ಪೇನ್‌ನ ವೆಲೆನ್ಸಿಯಾದಲ್ಲಿ ಡಿಸೆಂಬರ್ 11ರಿಂದ 17ರವರೆಗೆ ಈ ಟೂರ್ನಿ ನಡೆಯಲಿದೆ. ಭಾರತ ತಂಡವು ಬಿ ಗುಂಪಿನಲ್ಲಿದೆ. ಕೆನಡಾ, ಜಪಾನ್‌ ಮತ್ತು ದಕ್ಷಿಣ ಆಫ್ರಿಕಾ ಈ ಗುಂಪಿನ ಇನ್ನುಳಿದ ತಂಡಗಳು. ಎಂಟು ರಾಷ್ಟ್ರಗಳು ಪಾಲ್ಗೊಳ್ಳುವ ಈ ಟೂರ್ನಿಯು ಮುಂದಿನ ಆವೃತ್ತಿಯ ಎಫ್‌ಐಎಚ್‌ ಪ್ರೊ ಲೀಗ್‌ಗೆ ಅರ್ಹತಾ ಟೂರ್ನಿಯಾಗಿದೆ. ಟೂರ್ನಿಯ ಮೊದಲ ದಿನ ಕೆನಡಾ ವಿರುದ್ಧ ಆಡಲಿರುವ ಭಾರತ, 12 ಮತ್ತು 14ರಂದು ಕ್ರಮವಾಗಿ ಜಪಾನ್‌ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.