ಜ.8ರಂದು ಗ್ರೇಟ್ ಬೆಂಗಳೂರು 10ಕೆ ಓಟ ಬೆಂಗಳೂರು: ಮುಂದಿನ ವರ್ಷದ ಜನವರಿ 8ರಂದು ಬೆಂಗಳೂರಿನಲ್ಲಿ ಗ್ರೇಟ್ ಬೆಂಗಳೂರು 10 ಕೆ ಓಟ ನಡೆಯಲಿದೆ. ರಾಜ್ಯ ಯುವ ಸಬಲೀಕರಣ ಹಾಊ ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಹಾಗೂ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಗಳ ಆಶ್ರಯದಲ್ಲಿ ಈ ಓಟ ನಡೆಯಲಿದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ, ‘ಆರೋಗ್ಯಪೂರ್ಣ ಜೀವನಶೈಲಿ ರೂಢಿಸಿಕೊಂಡರೆ ಎಲ್ಲ ಕಾಯಿಲೆಗಳನ್ನೂ ದೂರವಿಡಬಹುದು. ಜೊತೆಗೆ ಕ್ರೀಡಾಪ್ರತಿಭಾವಂತರಿಗೂ ಒಂದು ವೇದಿಕೆ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಈ ಓಟವನ್ನು ಆಯೋಜಿಸಲಾಗುತ್ತಿದೆ’ ಎಂದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಕೆಒಎ ಅಧ್ಯಕ್ಷ ಗೋವಿಂದರಾಜ್, ‘ಮಕ್ಕಳು, ಹಿರಿಯರು ಮತ್ತು ಕುಟುಂಬದ ಎಲ್ಲರೂ ಭಾಗವಹಿಸಲು ಅವಕಾಶವಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವರು’ ಎಂದರು. ಅಲ್ಲದೇ ಗಾಲಿಕುರ್ಚಿ ಅಥ್ಲೀಟ್‌ಗಳಿಗಾಗಿ 5 ಕೆ ಫನ್ ರನ್ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಕೆಒಎ ಪ್ರಧಾನ ಆರ್ಯದರ್ಶಿ ಅನಂತರಾಜು, ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ದರ್ಶಿ ಡಾ. ಶಾಲಿನಿ ರಜನೀಶ್ ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.