ಫೆನ್ಸಿಂಗ್: ಮೈಸೂರಿನ ಸಚಿನ್‌ಗೆ ಚಿನ್ನ ಮೈಸೂರು:ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಶನಿವಾರ ನಡೆದ ದಸರಾ ಕೂಟದಫೆನ್ಸಿಂಗ್‌ನಲ್ಲಿ ಮೈಸೂರು ವಲಯ ಪ್ರಾಬಲ್ಯ ಮೆರೆಯಿತು. ಪುರುಷರ ‌‌ಸೆಬರ್ ಸ್ಪರ್ಧೆಯಲ್ಲಿ ಮೈಸೂರಿನ ಕೆ.ಆರ್‌.ಸಚಿನ್‌, 15–13ರಲ್ಲಿ ಮೈಸೂರಿನ ಕೆ.ಡಿ.ಉತ್ತಯ್ಯ ಅವರನ್ನು ಮಣಿಸಿದರು. ಬೆಂಗಳೂರಿನ ವಿನಯ್‌ ಕುಮಾರ್‌ ಹಾಗೂ ಎಂ.ಎನ್‌.ಮನೋಜ್‌ ಕಂಚು ಗೆದ್ದರು.ಫಾಯ್ಲ್‌ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಗೋಕುಲನಾಥ್‌, ಎಸ್‌.ಪಿ.ಶ್ರೀನಾಥ್‌ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.