ದಸರಾ ಕ್ರೀಡಾಕೂಟ: ಈಜು ಸ್ಪರ್ಧೆಯಲ್ಲಿ ರಾಜ್‌, ನಾಯರ್‌ಗೆ ಚಿನ್ನ ಮೈಸೂರು: ಬೆಂಗಳೂರಿನ ಕಾರ್ತಿಕೇಯನ್‌ ನಾಯರ್‌ ಹಾಗೂ ರಾಜ್‌ ವಿನಾಯಕ್‌ ರಿಲೇಕರ್‌ ಅವರು ದಸರಾ ಈಜು ಕೂಟದಲ್ಲಿ ತಲಾ ಎರಡು ಚಿನ್ನ, ಒಂದು ಬೆಳ್ಳಿ ಗೆದ್ದು ವೈಯಕ್ತಿಕ ವಿಭಾಗದಲ್ಲಿ ಜಂಟಿ ಚಾಂಪಿಯನ್ ಆದರು. ಮಹಿಳಾ ವಿಭಾಗದಲ್ಲಿಶ್ರೀಚರಣಿ ತುಮು 3 ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದು ಚಾಂಪಿಯನ್‌ ಆದರು. ಚಾಮುಂಡಿ ವಿಹಾರ ಕ್ರೀಡಾಂಗಣದ ಈಜುಕೊಳದಲ್ಲಿ ಶುಕ್ರವಾರ ನಡೆದ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕಾರ್ತಿಕೇಯನ್ ನಾಯರ್‌ 57.25 ಸೆಕಂಡ್‌ಗಳಲ್ಲಿ ಗುರಿ ತಲುಪಿದರೆ,200 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ 2.01.56 ನಿಮಿಷಗಳಲ್ಲಿ ಗೆಲುವಿನ ಗುರಿ ಮುಟ್ಟಿದರು.100 ಮೀ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಜಯಿಸಿದರು. ರಾಜ್‌ ವಿನಾಯಕ್‌ ರಿಲೇಕರ್ 100 ಮೀ ಫ್ರೀಸ್ಟೈಲ್‌ನಲ್ಲಿ 54.31 ಸೆಕೆಂಡ್‌ಗಳಲ್ಲಿ ಗೆದ್ದರು., 200 ಮೀ ಐ.ಎಂ ಸ್ಪರ್ಧೆಯಲ್ಲಿ 2.18.69 ನಿಮಿಷದಲ್ಲಿ ಚಿನ್ನದ ಪದಕ ಗಿಟ್ಟಿಸಿದರು. 100 ಮೀ ಬಟರ್‌ಫ್ಲೈನಲ್ಲಿ ಬೆಳ್ಳಿ ಪದಕ ಪಡೆದರು.ಮಹಿಳೆಯರ ವಿಭಾಗದ 100 ಮೀ ಫ್ರೀಸ್ಟೈಲ್‌, 200 ಮೀ. ಐ.ಎಂ,400 ಮೀಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದಶ್ರೀಚರಣಿ ತುಮು ಅವರು 100 ಮೀ ಬ್ರೆಸ್ಟ್‌ ಸ್ಟ್ರೋಕ್‌ನಲ್ಲೂ ಬೆಳ್ಳಿ ಗೆದ್ದರು. ಫಲಿತಾಂಶಗಳು: ಪುರುಷರು:400 ಮೀ. ಫ್ರೀಸ್ಟೈಲ್‌: ಎನ್‌.ಧೋನೀಶ್‌ (ಮೈಸೂರು, ಸಮಯ: 4.21.28 ನಿಮಿಷ)–1, ಮನೋಜ್ ನಾಯಕ (ಬೆಂಗಳೂರು ನಗರ)–2, ಅನಿಷ್‌ ಅಚ್ಯುತ (ಬೆಂಗಳೂರು)–3.100 ಮೀ. ಬಟರ್‌ಫ್ಲೈ: ಕಾರ್ತಿಕೇಯನ್‌ ನಾಯರ್‌ (ಬೆಂಗಳೂರು ನಗರ, ಸಮಯ: 57.25 ಸೆಕೆಂಡ್‌)–1, ರಾಜ್‌ ವಿನಾಯಕ್‌ ರಿಲೇಕರ್‌ (ಬೆಂಗಳೂರು)–2, ಮಣಿಕಂಠ ಲಕ್ಷ್ಮಣ (ಬೆಂಗಳೂರು ಗ್ರಾಮಾಂತರ)–3.200 ಮೀ. ಬ್ಯಾಕ್‌ಸ್ಟ್ರೋಕ್: ಬಿ.ಜಿತಿನ್‌ (ಬೆಂಗಳೂರು ನಗರ, ಸಮಯ: 2.57.25 ನಿಮಿಷ)–1, ಕೆ.ಕುಶಾಲ್‌ (ಬೆಂಗಳೂರು)–2, ಸನತ್ ಅವಧೂತ್‌ ಅನಂತ್‌ಭಟ್‌ (ಬೆಳಗಾವಿ)–3.100 ಮೀ. ಬ್ರೆಸ್ಟ್‌ಸ್ಟ್ರೋಕ್‌: ಮಣಿಕಂಠ ಲಕ್ಷ್ಮಣ (ಬೆಂಗಳೂರು ಗ್ರಾಮಾಂತರ, ಸಮಯ: 1.09.87 ನಿಮಿಷ)–1, ಸೂರ್ಯ ಜೋಯಪ್ಪ ಒಡಿಯಂಡ ರಾಜೇಶ್‌ (ಮೈಸೂರು)–2, ಶ್ರೇಯಸ್‌ ಮಂಜುನಾಥ್‌ (ಬೆಂಗಳೂರು)–3.200 ಮೀ. ವೈಯಕ್ತಿಕ ಮಿಡ್ಲೇ: ರಾಜ್‌ ವಿನಾಯಕ್‌ ರಿಲೇಕರ್ (ಬೆಂಗಳೂರು ನಗರ, ಸಮಯ: 2.18.69 ನಿ.)–1, ಬಿ.ಜಿತಿನ್‌ (ಬೆಂಗಳೂರು)–2, ಸೂರ್ಯ ಜೋಯಪ್ಪ ಒಡಿಯಂಡ ರಾಜೇಶ್‌ (ಮೈಸೂರು)–3.100 ಮೀ. ಫ್ರೀಸ್ಟೈಲ್‌: ರಾಜ್‌ ವಿನಾಯಕ್ ರಿಲೇಕರ್ (ಬೆಂಗಳೂರು ನಗರ, ಸಮಯ: 54.31 ಸೆಕೆಂಡ್‌)–1, ಕಾರ್ತಿಕೇಯನ್‌ ನಾಯರ್‌ (ಬೆಂಗಳೂರು ನಗರ)–2, ಎನ್‌.ಧೋನೀಷ್‌ (ಮೈಸೂರು)–3.200 ಮೀ. ಬ್ಯಾಕ್‌ಸ್ಟ್ರೋಕ್‌:‌ಮಣಿಕಂಠ ಲಕ್ಷ್ಮಣ (ಬೆಂಗಳೂರು ಗ್ರಾಮಾಂತರ, ಸಮಯ: 2.32.66 ನಿ)–1,ಸೂರ್ಯ ಜೋಯಪ್ಪ ಒಡಿಯಂಡ ರಾಜೇಶ್‌ (ಮೈಸೂರು)–2, ಶ್ರೇಯಸ್‌ ಮಂಜುನಾಥ್‌ (ಬೆಂಗಳೂರು)–3.100 ಮೀ.ಬ್ಯಾಕ್‌ಸ್ಟ್ರೋಕ್‌: ಆಕಾಶಮಣಿ (ಬೆಂಗಳೂರು, ಸಮಯ: 1.01.31 ನಿ)–1, ಎಂ.ಧ್ಯಾನ್‌ (ಬೆಂಗಳೂರು)–2, ಸನತ್‌ ಅವಧೂತ್‌ ಅನಂತಭಟ್‌ (ಬೆಳಗಾವಿ)–3.200 ಮೀ. ಫ್ರೀಸ್ಟೈಲ್‌: ಕಾರ್ತಿಕೇಯನ್‌ ನಾಯರ್‌ (ಬೆಂಗಳೂರು ನಗರ, ಸಮಯ: 20.01.56 ನಿ)–1, ಎನ್‌.ಧೋನೀಶ್‌ (ಮೈಸೂರು)–2, ಅನಿಷ್‌ ಅಚ್ಯುತ (ಬೆಂಗಳೂರು)–3.4x100 ಫ್ರೀಸ್ಟೈಲ್‌ ರಿಲೇ: ಆರ್‌.ವೈಭವ್, ಎಂ.ಧ್ಯಾ, ಕಾರ್ತಿಕೇಯನ್‌ ನಾಯರ್‌, ರಾಜ್‌ ವಿನಾಯಕ್‌ ರಿಲೇಕರ್‌ (ಬೆಂಗಳೂರು, ಸಮಯ: 3.53.29 ನಿಮಿಷ)–1, ಪೃಥ್ವಿಗೌಡ, ಸೂರ್ಯ ಜೋಯಪ್ಪ ಒಡಿಯಂಡ, ಚೇತನ್‌ ಶೆಟ್ಟಿ, ಧೋನೀಶ್‌ (ಮೈಸೂರು)–2, ಅಜಿಂಕ್ಯ ಅಭಿಜಿತ್‌ ಸುಣಗಾರ್‌, ತನಿಷ್ಕ್‌ ಮೋರೆ, ಆದಿತ್ಯ, ಚಿನ್ಮಯ್‌ (ಬೆಳಗಾವಿ)–3. ಮಹಿಳೆಯರು:400 ಮೀ. ಫ್ರೀಸ್ಟೈಲ್‌:ಶ್ರೀಚರಣಿ ತುಮು (ಬೆಂಗಳೂರು, ಸಮಯ: 4.50 ನಿ)–1, ಅನುಮತಿ ಚೌಗಲೆ (ಬೆಳಗಾವಿ)–2, ಲಕ್ಷ್ಮಿ ಟಿ.ನಿಕ್ಕಂ (ಬೆಂಗಳೂರು)–3.100 ಮೀ. ಬಟರ್‌ಫ್ಲೈ: ಎಚ್‌.ತಿತಿಕ್ಷಾ (ಬೆಂಗಳೂರು ನಗರ, ಸಮಯ: 1.08 ನಿಮಿಷ), ಅನುಮತಿ ಚೌಗುಲೆ (ಬೆಳಗಾವಿ)–2, ಆ್ಯನಾ ಸ್ಫೂರ್ತಿ ತೆರೇಸಾ (ಬೆಂಗಳೂರು)–3.200 ಮೀ. ಬ್ಯಾಕ್‌ಸ್ಟ್ರೋಕ್: ತನ್ಮಯಿ ಧರ್ಮೇಶ್ (ಬೆಂಗಳೂರು ನಗರ, ಸಮಯ: 2.39 ನಿಮಿಷ)–1, ಸಿದ್ಧಿ ಗೌತಮ್ ಶಾ (ಬೆಂಗಳೂರು)–2, ವೇದಾ (ಬೆಳಗಾವಿ)–3. 100 ಮೀ. ಬ್ರೆಸ್ಟ್‌ಸ್ಟ್ರೋಕ್‌: ರಿಯಾನಾ ಧೃತಿ ಫರ್ನಾಂಡಿಸ್‌ (ಮೈಸೂರು, ಸಮಯ: 1.20 ನಿಮಿಷ)–1, ಶ್ರೀಚರಣಿ ತುಮು (ಬೆಂಗಳೂರು)–2, ಹಿತೈಷಿ (ಮೈಸೂರು)–3.200 ಮೀ. ವೈಯಕ್ತಿಕ ಮಿಡ್ಲೇ: ಶ್ರೀ ಚರಣಿ ತುಮು (ಬೆಂಗಳೂರು ನಗರ, ಸಮಯ: 2.37.19 ನಿಮಿಷ)–1,ರಿಯಾನಾ ಧೃತಿ ಫರ್ನಾಂಡೀಸ್‌ (ಮೈಸೂರು)–2, ಅನುಮತಿ ಚೌಗಲೆ (ಬೆಳಗಾವಿ)–3.100 ಮೀ ಫ್ರೀಸ್ಟೈಲ್‌: ಶ್ರೀಚರಣಿ ತುಮು (ಬೆಂಗಳೂರು, ಸಮಯ: 1.02.91 ನಿ)–1, ಲಕ್ಷ್ಮಿ ನಿಕಂ (ಬೆಂಗಳೂರು)–2, ವಿದ್ಯಾ ಜಿ. ಭಂಡಾರಿ (ಮೈಸೂರು)–3.200 ಮೀ. ಬ್ರೆಸ್ಟ್‌ಸ್ಟ್ರೋಕ್‌: ರಿಯಾನಾ ಧೃತಿ ಫರ್ನಾಂಡಿಸ್ (ಮೈಸೂರು, ಸಮಯ: 2.55.60 ನಿ)–1, ಸಾನ್ವಿ (ಬೆಂಗಳೂರು)–2, ಮೇಘನಾಂಜಲಿ (ಕಲಬುರ್ಗಿ)–3.100 ಮೀ ಬ್ಯಾಕ್‌ಸ್ಟ್ರೋಕ್‌: ಸಿದ್ಧಿ ಗೌತಂ ಶಾ (ಬೆಂಗಳೂರು ನಗರ, ಸಮಯ: 1.11.88 ನಿ)–1, ಕೆ.ಆರ್.ಶೃತಿ (ಬೆಂಗಳೂರು), ವೇದಾ ವೈಭವ್‌ ಖಾನೊಲ್ಕರ್ (ಬೆಳಗಾವಿ)–3.200 ಮೀ ಫ್ರೀಸ್ಟೈಲ್‌: ಅನುಮತಿ ಚೌಗಲೆ (ಬೆಳಗಾವಿ, ಸಮಯ: 2.18.53 ನಿ)–1, ಎಂ.ಪಿ.ಆರ್ನಾ (ಬೆಂಗಳೂರು)–2, ಲಕ್ಷ್ಮಿ ಟಿ. ನಿಕಂ (ಬೆಂಗಳೂರು)–3.4x100 ಫ್ರೀಸ್ಟೈಲ್‌ ರಿಲೇ: ಶ್ರೀಚರಣಿ ತುಮು, ಲಕ್ಷ್ಮಿ ಟಿ. ನಿಕಂ, ಸಾಕ್ಷಿ ಸಂಜೀವ್‌ ದ್ಯಾಮಣ್ಣನವರ್‌, ಎಂ.ಪಿ.ಆರ್ನಾ (ಬೆಂಗಳೂರು ನಗರ, ಸಮಯ: 4.21.72 ನಿ), ರಿಯಾನಾ ಧೃತಿ ಫರ್ನಾಂಡಿಸ್, ವಿದ್ಯಾ ಜಿ. ಭಂಡಾರಿ, ಎಸ್‌.ಎಸ್‌.ನಂದಿನಿ, ಹಿತೈಶಿ (ಮೈಸೂರು), ಶರ್ಮಿಷ್ಟಾ ಮಾಲೈ, ವೇದಾ ವೈಭವ ಖಾಲೊನ್ಕರ್‌, ಸಾಕ್ಷಿ ಶಿರಳ್ಳಿ, ಭೂಮಿ ಭಾಗವತ್‌ (ಬೆಳಗಾವಿ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.