ಈಕ್ವೆಸ್ಟ್ರಿಯನ್‌: ಭಾರತ ತಂಡಕ್ಕೆ ಐತಿಹಾಸಿಕ ಕಂಚು ನವದೆಹಲಿ: ಭಾರತದ ಈಕ್ವೆಸ್ಟ್ರಿಯನ್ ತಂಡವು ಜೋರ್ಡಾನ್‌ನ ವಾಡಿ ರಮ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಟೆಂಟ್‌ ಪೆಗಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದುಕೊಂಡಿದೆ. ಭಾರತ ತಂಡವು ಇದೇ ಮೊದಲ ಬಾರಿ ಈ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿತ್ತು. ರಿತಿಕಾ ದಹಿಯಾ, ಪ್ರಿಯಾಂಕಾ ಭಾರದ್ವಾಜ್‌ ಮತ್ತು ಖುಷಿ ಸಿಂಗ್‌ ತಂಡದಲ್ಲಿದ್ದರು. ಭಾರತ ತಂಡವು ಒಟ್ಟು 136 ಪಾಯಿಂಟ್ಸ್ ಕಲೆಹಾಕಿತು. ಚಿನ್ನ ಗೆದ್ದ ದಕ್ಷಿಣ ಆಫ್ರಿಕಾ 170.5 ಪಾಯಿಂಟ್ಸ್ ಗಳಿಸಿದರೆ, ಒಮನ್‌ (146) ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು ಎಂದು ಭಾರತ ಈಕ್ವೆಸ್ಟ್ರಿಯನ್ ಫೆಡರೇಷನ್ ಪ್ರಕಟಣೆಯಲ್ಲಿ ತಿಳಿಸಿದೆ. ಚಾಂಪಿಯನ್‌ಷಿಪ್‌ನಲ್ಲಿ 14 ದೇಶಗಳ ತಂಡಗಳು ಭಾಗವಹಿಸಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.