ಶೂಟಿಂಗ್‌: ಭಾರತಕ್ಕೆ ಚಿನ್ನ ಒಸಿಜೆಕ್‌, ಕ್ರೊವೇಷ್ಯಾ: ಭಾರತದ ಜೂನಿಯರ್ ಪುರುಷರ ಟ್ರ್ಯಾಪ್ ತಂಡವು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶಾಟ್‌ಗನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಶನಿವಾರ ನಡೆದ ಫೈನಲ್‌ನಲ್ಲಿ ಭಾರತದ ಶೂಟರ್‌ಗಳು 6–4ರಿಂದ ಇಟಲಿ ತಂಡವನ್ನು ಸೋಲಿಸಿದರು. ಅಮೆರಿಕ ತಂಡ ಕಂಚು ಗೆದ್ದಿತು. ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು. ಭಾರತ ತಂಡದಲ್ಲಿ ಶಪಥ್ ಭಾರಧ್ವಾಜ್, ಶಾರ್ದೂಲ್ ವಿಹಾನ್ ಮತ್ತು ಆರ್ಯವಂಶ್ ತ್ಯಾಗಿ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.