ವಿಶ್ವ ಬಿಲಿಯರ್ಡ್ಸ್: ಪಂಕಜ್‌, ಕೊಠಾರಿಗೆ ನೇರ ಅರ್ಹತೆ ನವದೆಹಲಿ: ಭಾರತದ ಪಂಕಜ್ ಅಡ್ವಾಣಿ, ಸೌರವ್ ಕೊಠಾರಿ ಮತ್ತು ಧ್ರುವ ಸಿತ್ವಾಲಾ ಅವರು ಐಬಿಎಸ್‌ಎಫ್‌ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ಗೆ ನೇರ ಪ್ರವೇಶ ಪಡೆದಿದ್ದಾರೆ. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಅಕ್ಟೋಬರ್ 4ರಿಂದ 8ರವರೆಗೆ ಈ ಚಾಂಪಿಯನ್‌ಷಿಪ್ ನಿಗದಿಯಾಗಿದೆ. ಧ್ವಜ್‌ ಹರಿಯಾ, ಲೌಕಿಕ್‌ ಪಥೇರ್, ಎಸ್‌. ಶ್ರೀಕೃಷ್ಣ ಮತ್ತು ರೋಹನ್‌ ಜಂಬೂಸಾರಿಯಾ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಇನ್ನುಳಿದ ಸ್ಪರ್ಧಿಗಳು. ಕೋವಿಡ್‌ ಕಾರಣದಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಚಾಂಪಿಯನ್‌ಷಿಪ್ ಈ ಬಾರಿ ನಡೆಯುತ್ತಿದ್ದು, ಮ್ಯಾನ್ಮಾರ್‌, ಸಿಂಗಪುರ, ಭಾರತ, ವಿಯೆಟ್ನಾಂ, ಶ್ರೀಲಂಕಾ, ಥಾಯ್ಲೆಂಡ್‌, ಮಲೇಷ್ಯಾ ಮತ್ತಿತರ ದೇಶಗಳ ಪ್ರಮುಖ ಅಥ್ಲೀಟ್‌ಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. 2019ರಲ್ಲಿ ಕೊನೆಯ ಬಾರಿ ಚಾಂಪಿಯನ್‌ಷಿಪ್‌ ಮ್ಯಾನ್ಮಾರ್‌ನಲ್ಲಿ ನಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.