ಏಷ್ಯನ್‌ ಲಾನ್‌ ಬೌಲ್‌ ಚಾಂಪಿಯನ್‌ಶಿಪ್‌: ರಾಘವೇಂದ್ರಗೆ ಬೆಳ್ಳಿ ಬೆಂಗಳೂರು:ಏಷ್ಯನ್‌ ಲಾನ್‌ ಬೌಲ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಕರ್ನಾಟಕದ ಪಿ. ರಾಘವೇಂದ್ರ ಬೆಳ್ಳಿ ಪದಕ ಜಯಿಸಿದ್ದಾರೆ. ಮಲೇಷಿಯಾದ ಜೋಹನ್‌ನಲ್ಲಿ ನಡೆದ 3ನೇ ಏಷ್ಯನ್‌ ಲಾನ್‌ ಬೌಲ್‌ ಚಾಂಪಿಯನ್‌ಶಿಪ್‌ನ ಡಬಲ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕನ್ನಡಿಗ ರಾಘವೇಂದ್ರ ಆಗಿದ್ದಾರೆ. ಹರಿಯಾಣದ ವಿಕಾಸ್‌ ನವಾಲ್‌ ಅವರ ಜೊತೆ ಸೇರಿ ಈ ಸಾಧನೆ ಮಾಡಿದ್ದಾರೆ. ರಾಘವೇಂದ್ರ ಅವರ ಈ ಸಾಧನೆಗೆ ಭಾರತೀಯ ಪ್ಯಾರಾ ಒಲಿಂಪಿಕ್‌ ಸಮಿತಿ ಅಭಿನಂದನೆ ಸಲ್ಲಿಸಿದೆ. ಸತ್ಯನಾರಾಯಣ್‌ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಈ ಸಾಧನೆ ಮಾಡಿದ್ದಾರೆ. ರಾಘವೇಂದ್ರ ಅವರು ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಉದ್ಯೋಗಿಯಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.