ಬಸವನಗುಡಿ ತಂಡ ಜಯಭೇರಿ ನರಗುಂದ (ಗದಗ ಜಿಲ್ಲೆ): ಬೆಂಗಳೂರಿನ ಬಸವನಗುಡಿ ಮತ್ತು ಬೆಳಗಾವಿ ಜಿಲ್ಲಾ ತಂಡಗಳುಸಿ.ಸಿ.ಪಾಟೀಲ ಅಭಿಮಾನಿ ಬಳಗದಿಂದಪಟ್ಟಣದಲ್ಲಿ ನಡೆಯುತ್ತಿರುವ ‘ಎ’ ದರ್ಜೆ ರಾಷ್ಟ್ರಮಟ್ಟದ ಆಹ್ವಾನಿತ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಜಯಿಸಿದವು. ಗುರುವಾರ ನಡೆದ ಪುರುಷರ ವಿಭಾಗದ ಲೀಗ್‌ ಪಂದ್ಯದಲ್ಲಿ ಬಸವನಗುಡಿ ತಂಡವು 43-37ರಿಂದ ಗದಗ ಜಿಲ್ಲಾ ತಂಡದ ವಿರುದ್ಧ ಗೆದ್ದಿತು. ಇನ್ನೊಂದು ಪಂದ್ಯದಲ್ಲಿಬೆಳಗಾವಿ ಜಿಲ್ಲಾ ತಂಡ 39-37ರಿಂದ ಯೂತ್‌ ಕಬಡ್ಡಿ ಹರಿಯಾಣ ವಿರುದ್ಧ ಜಯ ಸಾಧಿಸಿತು. ಆರ್ಡಿನನ್ಸ್‌ ಫ್ಯಾಕ್ಟರಿ 44-30ರಿಂದ ಬಾಗಲಕೋಟೆ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಉತ್ತರಪ್ರದೇಶದ ಜೆಡಿ ಅಕಾಡೆಮಿ 80-26ರಿಂದ ಉತ್ತರಕನ್ನಡ ಜಿಲ್ಲೆಯ ವಿರುದ್ಧ ಜಯಿಸಿತು. ಹಿಮಾಚಲ ಪ್ರದೇಶ ಮತ್ತು ಯಾದವ ಅಕಾಡೆಮಿ ನಾಗಪುರದ ನಡು ವಿನ (22-22) ಪಂದ್ಯ ಟೈ ಆಯಿತು. ಮುನ್ಸಿಪಲ್ ಕಾರ್ಪೋರೇಶನ್ ಠಾಣೆ 36-25ರಿಂದ ಬಿಎಂಟಿಸಿ ಬೆಂಗಳೂರು ವಿರುದ್ಧ ಗೆಲುವು ಸಾಧಿಸಿತು. ಎಸ್‌ವಿಎಂ ಪಾಣಿಪತ್ 32-11ರಿಂದ ಬೆಂಗಳೂರು ಮಾರುತಿ ತಂಡದ ವಿರುದ್ಧ ಜಯ ಸಾಧಿಸಿತು. ಸಿ.ಸಿ.ಪಾಟೀಲ ಅಭಿಮಾನಿ ಬಳಗ ನರಗುಂದ ತಂಡವು 40-25 ರಿಂದ ಚಿಕ್ಕಬಳ್ಳಾಪುರ ತಂಡದ ವಿರುದ್ಧ ಗೆಲುವು ಸಾಧಿಸಿತು. ರೆಡ್ ಆರ್ಮಿ ದೆಹಲಿ 62-18ರಿಂದ ಹೊನ್ನಪ್ಪ ಅಕಾಡೆಮಿ ಕೇಸರಗೊಪ್ಪ ವಿರುದ್ಧ ಜಯ ಸಾಧಿಸಿತು. ಸೆಂಟ್ರಲ್ ರೈಲ್ವೆ 35-16ರಿಂದ ಗದಗ ವಿರುದ್ಧ ಗೆಲುವು ಸಾಧಿಸಿತು.ಆಂಧ್ರಪ್ರದೇಶ ತಂಡ 33-32ರಿಂದ ಕುರುಕ್ಷೇತ್ರ ವಿವಿ ವಿರುದ್ಧ ಗೆದ್ದಿತು. ಆರ್ಡಿನನ್ಸ್‌ ಫ್ಯಾಕ್ಟರಿ 36-8ರಿಂದ ಹೊನ್ನಪ್ಪ ಅಕಾಡೆಮಿ ವಿರುದ್ಧ ಗೆಲುವು ಸಾಧಿಸಿತು. ಸಾಯ್ ಗುಜರಾತ್ ತಂಡ 41-38ರಿಂದ ಜೆಡಿ ಅಕಾಡೆಮಿ ವಿರುದ್ಧ ಜಯ ಸಾಧಿಸಿತು.ಯೂತ್‌ ಕಬಡ್ಡಿ 34-29ರಿಂದ ಎಸ್‌ಡಿಎಂ ಉಜಿರೆ ವಿರುದ್ದ ಜಯ ಸಾಧಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.