ಕ್ವಾರ್ಟರ್‌ ಫೈನಲ್‌ಗೆ ಬೋಪಣ್ಣ ಜೋಡಿ ವಿಯೆನ್ನಾ: ಭಾರತದ ರೋಹನ್‌ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮಟ್ವೆ ಮಿಡ್ಲ್‌ಕೂಪ್‌ ಜೋಡಿ ಇಲ್ಲಿ ನಡೆಯುತ್ತಿರುವ ಎಸ್ಟ್‌ ಬ್ಯಾಂಕ್‌ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಬುಧವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ– ನೆದರ್ಲೆಂಡ್ಸ್‌ ಜೋಡಿ 6–1, 6–3 ರಲ್ಲಿ ಆರ್ಜೆಂಟೀನಾದ ಪೆಡ್ರೊ ಕಚಿನ್‌ ಮತ್ತು ಡಿಯಾಗೊ ಸ್ವಾರ್ಟ್ಸ್‌ಮನ್‌ ವಿರುದ್ಧ ಗೆದ್ದಿತು. ಬೋಪಣ್ಣ ಮತ್ತು ಮಿಡ್ಲ್‌ಕೂಪ್‌ ಅವರು ಎಂಟರಘಟ್ಟದಲ್ಲಿ ಆರ್ಜೆಂಟೀನಾದ ಅಂಡ್ರೆಸ್‌ ಮಲ್ಟೆನಿ– ಮೆಕ್ಸಿಕೊದ ಸಾಂಟಿಯಾಗೊ ಗೊನ್ಸಾಲೆಸ್‌ ವಿರುದ್ಧ ಪೈಪೋಟಿ ನಡೆಸುವರು. ಬೋಪಣ್ಣ ಜೋಡಿ ಈ ತಿಂಗಳ ಆರಂಭದಲ್ಲಿ ಟೆಲ್‌ ಅವೀವ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.