ಕಬಡ್ಡಿ: ಯು ಮುಂಬಾಗೆ ಮಣಿದ ಪುಣೇರಿ ಪಲ್ಟನ್‌ ಪುಣೆ: ಗುಮನ್‌ ಸಿಂಗ್‌ ಅವರ ಮಿಂಚಿನ ಆಟದ ನೆರವಿನಿಂದ ಯು ಮುಂಬಾ ತಂಡದವರು ಪ್ರೊ ಕಬಡ್ಡಿ ಲೀಗ್‌ನಲ್ಲಿ 34–33 ರಲ್ಲಿ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿದರು. ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗುಮನ್‌ ಅವರು 13 ಪಾಯಿಂಟ್ಸ್‌ ಗಳಿಸಿ ಮುಂಬಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಶೀಶ್‌ 6 ಹಾಗೂ ರಿಂಕು 4 ಪಾಯಿಂಟ್ಸ್‌ ತಂದಿತ್ತರು. ಆರಂಭದಿಂದಲೇ ತುರುಸಿನ ಹೋರಾಟ ನಡೆದ ಪಂದ್ಯದ ಪ್ರಥಮಾರ್ಧದಲ್ಲಿ ಎರಡೂ ತಂಡಗಳು 15–15 ರಲ್ಲಿ ಸಮಬಲ ಸಾಧಿಸಿದ್ದವು. ಪಲ್ಟನ್‌ ಪರ ಮೋಹಿತ್‌ ಗೋಯತ್ 13 ಹಾಗೂ ಅಸ್ಲಂ ಇನಾಂದಾರ್‌ 8 ಪಾಯಿಂಟ್ಸ್‌ ಗಳಿಸಿದರು. ದಿನದ ಮೊದಲ ಪಂದ್ಯದಲ್ಲಿ ಯು.ಪಿ.ಯೋಧಾಸ್‌ 40–34 ರಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಮಣಿಸಿತು. ಇಂದಿನ ಪಂದ್ಯಗಳು ಬೆಂಗಾಲ್‌ ವಾರಿಯರ್ಸ್‌– ಗುಜರಾತ್‌ ಜೈಂಟ್ಸ್‌ ತೆಲುಗು ಟೈಟನ್ಸ್‌– ಯು.ಪಿ.ಯೋಧಾಸ್ ಜೈಪುರ ಪಿಂಕ್‌ ಪ್ಯಾಂಥರ್ಸ್‌– ದಬಂಗ್‌ ಡೆಲ್ಲಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.