ಪ್ಯಾರಾ ಶೂಟಿಂಗ್‌: ಭಾರತಕ್ಕೆ ಚಿನ್ನ, ಕಂಚು ನವದೆಹಲಿ: ಭಾರತದರಾಹುಲ್ ಜಾಕರ್, ಸಿಂಗರಾಜ್ ಮತ್ತು ನಿಹಾಲ್ ಸಿಂಗ್‌ ಅವರನ್ನೊಳಗೊಂಡ ತಂಡವುಯುನೈಟೆಡ್‌ ಅರಬ್ ಎಮಿರೇಟ್ಸ್‌ನ ಅಲ್‌ ಐನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನ 25 ಮೀಟರ್ಸ್ ಪಿಸ್ತೂಲ್‌ ಪಿ3 ವಿಭಾಗದಲ್ಲಿ ಸೋಮವಾರ ಚಿನ್ನದ ಪದಕ ಗೆದ್ದುಕೊಂಡಿತು. ರಾಹುಲ್ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.