ಹಾಕಿ: ಡೈನಮೈಟ್ಸ್ ಯುನೈಟೆಡ್‌ಗೆ ಜಯ ಬೆಂಗಳೂರು: ಎ.ಎ. ಬೋಪಣ್ಣ ಗಳಿಸಿದ ಎರಡು ಗೋಲುಗಳು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಸಿ ಡಿವಿಷನ್ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಡೈನಮೈಟ್ಸ್ ಯುನೈಟೆಡ್ ತಂಡಕ್ಕೆ ಗೆಲುವು ತಂದುಕೊಟ್ಟವು. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಡೈನಮೈಟ್ಸ್ ಯುನೈಟೆಡ್ ತಂಡವು 4–0ಯಿಂದ ಕಾವೇರಿ ಸ್ಪೋರ್ಟ್ಸ್ ಕ್ಲಬ್ ಎದುರು ಗೆದ್ದಿತು. ವಿಜೇತ ತಂಡದ ಪರ ಬೋಪಣ್ಣ (24, 34ನೇ ನಿಮಿಷ), ಕಾರ್ತಿಕ್ ಪೂವಣ್ಣ (19ನೇ ನಿ.) ಮತ್ತು ಪೂವಣ್ಣ ಎಂ.ಸಿ. (42ನೇ ನಿ.) ಗೋಲು ಹೊಡೆದರು. ಇನ್ನೊಂದು ಪಂದ್ಯದಲ್ಲಿ ಈಸ್ಟ್ ಇಂಡಿಯಾ ಹಾಕಿ ಕ್ಲಬ್‌ 4–0ಯಿಂದ ಫ್ರೆಂಡ್ಸ್ ಹಾಕಿ ಕ್ಲಬ್ ಕಲಬುರ್ಗಿ ಎದುರು ಜಯಿಸಿತು. ಈಸ್ಟ್ ಇಂಡಿಯಾ ‍ಪ‍ರ ವಿವೇಕ್‌ (27, 35ನೇ ನಿ.), ಶೈಲೇಶ್ (9ನೇ ನಿ.) ಮತ್ತು ಪೆಮ್ಮಯ್ಯ (41ನೇ ನಿ.) ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.