25 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ; ನ.30 ರಂದು ಪ್ರದಾನ ನವದೆಹಲಿ (ಪಿಟಿಐ): ಟೇಬಲ್‌ ಟೆನಿಸ್‌ ದಿಗ್ಗಜ ಆಟಗಾರ ಅಚಂತಾ ಶರತ್‌ ಕಮಲ್‌ ಅವರು ಕ್ರೀಡಾಕ್ಷೇತ್ರದ ಸಾಧಕರಿಗೆ ನೀಡುವ ಅತ್ಯುನ್ನತ ಗೌರವ ‘ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಬ್ಯಾಡ್ಮಿಂಟನ್‌ ಆಟಗಾರರಾದ ಲಕ್ಷ್ಯ ಸೇನ್‌, ಎಚ್‌.ಎಸ್‌.ಪ್ರಣಯ್‌, ಮಹಿಳಾ ಬಾಕ್ಸರ್‌ ನಿಖತ್‌ ಜರೀನ್, ಅಥ್ಲೀಟ್‌ಗಳಾದ ಎಲ್ದೋಸ್‌ ಪಾಲ್‌ ಮತ್ತು ಅವಿನಾಶ್‌ ಸಬ್ಳೆ ಒಳಗೊಂಡಂತೆ 25 ಮಂದಿ ಈ ಸಾಲಿನ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನ.30 ರಂದು ನಡೆಯಲಿದೆ. ಪ್ರಶಸ್ತಿ ವಿಜೇತರ ವಿವರ: ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ: ಅಚಂತಾ ಶರತ್‌ ಕಮಲ್ (ಟೇಬಲ್‌ ಟೆನಿಸ್‌) ಅರ್ಜುನ: ಸೀಮಾ ಪೂನಿಯಾ (ಅಥ್ಲೆಟಿಕ್ಸ್‌), ಎಲ್ದೋಸ್‌ ಪಾಲ್‌ (ಅಥ್ಲೆಟಿಕ್ಸ್‌), ಅವಿನಾಶ್‌ ಸಬ್ಳೆ (ಅಥ್ಲೆಟಿಕ್ಸ್‌), ಲಕ್ಷ್ಯ ಸೇನ್‌ (ಬ್ಯಾಡ್ಮಿಂಟನ್‌), ಎಚ್‌.ಎಸ್‌.ಪ್ರಯಣ್ (ಬ್ಯಾಡ್ಮಿಂಟನ್‌), ಅಮಿತ್‌ (ಬಾಕ್ಸಿಂಗ್), ನಿಖರ್‌ ಜರೀನ್ (ಬಾಕ್ಸಿಂಗ್‌), ಭಕ್ತಿ ಕುಲಕರ್ಣಿ (ಚೆಸ್‌), ಆರ್‌.‍‍ಪ್ರಗ್ನಾನಂದ (ಚೆಸ್‌), ದೀಪ್‌ ಗ್ರೇಸ್‌ ಎಕ್ಕಾ (ಹಾಕಿ), ಸುಶೀಲಾ ದೇವಿ (ಜುಡೊ), ಸಾಕ್ಷಿ ಕುಮಾರಿ (ಕಬಡ್ಡಿ), ನಯನ್ಮೊಣಿ ಸೈಕಿಯಾ (ಲಾನ್‌ ಬಾಲ್), ಸಾಗರ್‌ ಕೈಲಾಸ್ (ಮಲ್ಲಕಂಬ), ಇಳವೇನಿಲ್ ವಲರಿವನ್ (ಶೂಟಿಂಗ್), ಓಂಪ್ರಕಾಶ್‌ ಮಿತರ್ವಲ್ (ಶೂಟಿಂಗ್), ಶ್ರೀಜಾ ಅಕುಲಾ (ಟಿಟಿ), ವಿಕಾಸ್‌ ಠಾಕೂರ್‌ (ವೇಟ್‌ಲಿಫ್ಟಿಂಗ್‌), ಅನ್ಶು (ಕುಸ್ತಿ), ಸರಿತಾ (ಕುಸ್ತಿ), ಪರ್ವೀನ್‌ (ವುಶು), ಮಾನಸಿ ಗಿರೀಶ್‌ಚಂದ್ರ ಜೋಷಿ (ಪ್ಯಾರಾ ಬ್ಯಾಡ್ಮಿಂಟನ್‌), ತರುಣ್ ಧಿಲ್ಲೋನ್ (ಪ್ಯಾರಾ ಬ್ಯಾಡ್ಮಿಂಟನ್‌), ಸ್ವಪ್ನಿಲ್ ಸಂಜಯ್‌ ಪಾಟೀಲ್ (ಪ್ಯಾರಾ ಈಜು), ಜೆರ್ಲಿನ್‌ ಅನಿಕಾ (ಡೆಫ್‌ ಬ್ಯಾಡ್ಮಿಂಟನ್‌) ದ್ರೋಣಾಚಾರ್ಯ: ಜೀವನ್‌ಜ್ಯೋತ್‌ ಸಿಂಗ್‌ ತೇಜ (ಆರ್ಚರಿ), ಮೊಹಮ್ಮದ್‌ ಅಲಿ ಖಮರ್‌ (ಬಾಕ್ಸಿಂಗ್‌), ಸುಮಾ ಸಿದ್ಧಾರ್ಥ್‌ ಶಿರೂರು (ಪ್ಯಾರಾ ಶೂಟಿಂಗ್‌), ಸುಜೀತ್‌ ಮಾನ್ (ಕುಸ್ತಿ) ದ್ರೋಣಾಚಾರ್ಯ (ಜೀವಮಾನ ಸಾಧನೆ ವಿಭಾಗ): ದಿನೇಶ್‌ ಜವಾಹರ್‌ ಲಾಡ್ (ಕ್ರಿಕೆಟ್‌), ಬಿಮಲ್‌ ಪ್ರಫಲ್ಲಾ ಘೋಷ್‌ (ಫುಟ್‌ಬಾಲ್‌), ರಾಜ್‌ ಸಿಂಗ್‌ (ಕುಸ್ತಿ) ಧ್ಯಾನ್‌ಚಂದ್‌: ಸಿ.ಅಶ್ವಿನಿ ಅಕ್ಕುಂಜಿ (ಅಥ್ಲೆಟಿಕ್ಸ್‌), ಬಿ.ಸಿ.ಸುರೇಶ್‌ (ಕಬಡ್ಡಿ), ಧರಂವೀರ್‌ ಸಿಂಗ್‌ (ಹಾಕಿ), ನೀರ್‌ ಬಹಾದೂರ್‌ ಗುರುಂಗ್ (ಪ್ಯಾರಾ ಅಥ್ಲೆಟಿಕ್ಸ್‌) ರಾಷ್ಟ್ರೀಯ ಖೇಲ್‌ ಪ್ರೋತ್ಸಾಹನ್‌ ಪುರಸ್ಕಾರ: ಟ್ರಾನ್ಸ್‌ಸ್ಟೇಡಿಯಾ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌, ಕಳಿಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ, ಲಡಾಖ್ ಸ್ಕಿ ಆ್ಯನ್ಡ್‌ ಸ್ನೋಬೋರ್ಡ್‌ ಅಸೋಸಿಯೇಷನ್ ಮೌಲಾನಾ ಅಬುಲ್‌ ಕಲಾಂ ಆಜಾದ್‌ ಟ್ರೋಫಿ: ಗುರು ನಾನಕ್ ದೇವ್‌ ವಿವಿ, ಅಮೃತಸರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.