ಶೂಟಿಂಗ್: ಭಾರತಕ್ಕೆ ಮತ್ತೆ ನಾಲ್ಕು ಚಿನ್ನ ನವದೆಹಲಿ: ಭಾರತ ತಂಡದವರು ಕೊರಿಯಾದ ಡೇಗುನಲ್ಲಿ ನಡೆಯುತ್ತಿರುವ ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌ನ ಏರ್‌ ಪಿಸ್ತೂಲ್ ವಿಭಾಗದ ಎಲ್ಲ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಪುರುಷರ 10 ಮೀಟರ್ಸ್ ಏರ್‌ ಪಿಸ್ತೂಲ್‌ನಲ್ಲಿ ಶಿವ ನರ್ವಾಲ್ ಮತ್ತು ಜೂನಿಯರ್ ಪುರುಷರ ವಿಭಾಗದಲ್ಲಿ ಸಾಗರ್ ಡಾಂಗಿ ಅಗ್ರಸ್ಥಾನ ಗಳಿಸಿದರು. ಸಂದೀಪ್‌ ಬಿಷ್ಣೋಯಿ, ಸಾಹಿಲ್‌ ಮತ್ತು ಅಮಿತ್ ಶರ್ಮಾ ಅವರನ್ನೊಳಗೊಂಡ ಯೂತ್‌ ಪುರುಷರ ತಂಡವು 10 ಮೀ. ಏರ್‌ ಪಿಸ್ತೂಲ್‌ ಫೈನಲ್‌ನಲ್ಲಿ 16–8ರಿಂದ ಕೊರಿಯಾ ತಂಡವನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟಿತು. ಇದೇ ಸ್ಪರ್ಧೆಯಲ್ಲಿ ಕನಿಷ್ಕಾ ದಾಗರ್‌, ಯಶವಿ ಜೋಷಿ ಮತ್ತು ಹರ್ನವದೀಪ್ ಕೌರ್ ಅವರಿದ್ದ ಭಾರತದ ಯೂತ್ ಮಹಿಳಾ ತಂಡವೂ ಚಿನ್ನ ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.