‘15ನೇ ವರ್ಷಕ್ಕೆ ಡಬ್ಲ್ಯುಡಬ್ಲ್ಯುಇಯತ್ತ ಆಸಕ್ತಿ‘ ಬೆಂಗಳೂರು: 15 ವರ್ಷದವನಿದ್ದಾಗ ನಾನು ಡಬ್ಲ್ಯುಡಬ್ಲ್ಯುಇಯತ್ತ ಆಸಕ್ತಿ ಬೆಳೆಸಿಕೊಂಡೆ. ನನ್ನ ಸಹೋದರ ಸಂಬಂಧಿಗಳು ಈ ಕ್ರೀಡೆಯಲ್ಲಿದ್ದರು. ಅವರಿಂದ ಪ್ರೇರಣೆ ಪಡೆದು ಈ ಕ್ಷೇತ್ರಕ್ಕೆ ಬಂದೆ ಎಂದುಸ್ಕಾಟ್ಲೆಂಡ್‌ನ ಡ್ರಿವ್ ಮ್ಯಾಕಿಂಟೈರ್ ಹೇಳಿದರು. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಇತ್ತೀಚೆಗೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಬಾಲಿವುಡ್‌ನ ಕೆಲವು ನಟರೊಂದಿಗೆ ಕೆಲವು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಲು ಮೊದಲ ಬಾರಿಗೆ ಭಾರತಕ್ಕೆ ಬಂದಿರುವೆ‘ ಎಂದರು. ಡ್ರಿವ್‌ ಹಲವು ಮಾನವೀಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಘ ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಭಾರತದಲ್ಲಿ ಡಬ್ಲ್ಯುಡಬ್ಲ್ಯುಇ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.