ಹಾಕಿ: ಮೈಸೂರಿಗೆ ಸಮಗ್ರ ಪ್ರಶಸ್ತಿ ಮಡಿಕೇರಿ: ಮೈಸೂರು ವಿಭಾಗ ತಂಡವು ಇಲ್ಲಿನ ಭಾರತ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ಶುಕ್ರವಾರ ಮುಕ್ತಾಯಗೊಂಡಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆಯೋಜಿಸಿದ್ದ ಟೂರ್ನಿಯಲ್ಲಿ ಮೈಸೂರು ತಂಡವು 33 ಪಾಯಿಂಟ್ಸ್ ಮೂಲಕ ಅಗ್ರಸ್ಥಾನ ಪಡೆಯಿತು. ಫಲಿತಾಂಶ:17 ವರ್ಷ ವಯೋ ಮಿತಿಯೊಳಗಿನ (ಪ್ರೌಢಶಾಲೆ) ಬಾಲಕಿಯರ ವಿಭಾಗ: ಮೈಸೂರು ವಿಭಾಗ ಪ್ರಥಮ (12 ಪಾಯಿಂಟ್‌), ಕ್ರೀಡಾ ಶಾಲೆ ಕೂಡಿಗೆ ದ್ವಿತೀಯ (9 ಪಾಯಿಂಟ್‌), ಬೆಳಗಾವಿ ವಿಭಾಗ ತೃತೀಯ (6 ಪಾಯಿಂಟ್‌), ಬೆಂಗಳೂರು ವಿಭಾಗ ನಾಲ್ಕನೇ ಸ್ಥಾನ (3 ಪಾಯಿಂಟ್‌), ಕಲಬುರಗಿ ವಿಭಾಗ 5ನೇ ಸ್ಥಾನ. 14 ವರ್ಷ ವಯೋಮಿತಿಯೊಳಗಿನ (ಪ್ರಾಥಮಿಕ ಶಾಲೆ ) ಬಾಲಕರ ವಿಭಾಗ: ಮೈಸೂರು ಪ್ರಥಮ (9 ಪಾಯಿಂಟ್‌), ಬೆಳಗಾವಿ ದ್ವಿತೀಯ(6 ಪಾಯಿಂಟ್‌), ಕಲಬುರಗಿ ತೃತೀಯ (3 ಪಾಯಿಂಟ್‌), ಬೆಂಗಳೂರು ವಿಭಾಗ ನಾಲ್ಕನೇ ಸ್ಥಾನ. 17 ವರ್ಷ ವಯೋಮಿತಿಯೊಳಗಿನ (ಪ್ರೌಢಶಾಲೆ ) ಬಾಲಕರ ವಿಭಾಗ: ಮೈಸೂರು ಪ್ರಥಮ (12 ಪಾಯಿಂಟ್‌), ಕ್ರೀಡಾ ಶಾಲೆ ಕೂಡಿಗೆ ದ್ವಿತೀಯ (9 ಪಾಯಿಂಟ್‌), ಬೆಂಗಳೂರು ತೃತೀಯ (6 ಪಾಯಿಂಟ್‌), ಕಲಬುರಗಿ 4ನೇ ಸ್ಥಾನ (3 ಪಾಯಿಂಟ್‌), ಬೆಳಗಾವಿ 5ನೇ ಸ್ಥಾನ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.