ಡಿ.9ರಿಂದ ಟಿಟಿ ಬೆಂಗಳೂರು: ಸಿ.ವಿ.ಎಲ್‌. ಶಾಸ್ತ್ರಿ ಸ್ಮರಣಾರ್ಥ ರಾಜ್ಯ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ ಡಿಸೆಂಬರ್‌ 9ರಿಂದ 12ರವರೆಗೆ ನಡೆಯಲಿದೆ. ಇಲ್ಲಿಯ ಮಲ್ಲೇಶ್ವರಂ ಕೆನರಾ ಯೂನಿಯನ್‌ನಿಂದ ಆಯೋಜಿಸಲ್ಪಡುವ ಟೂರ್ನಿಯಲ್ಲಿ 11, 13, 15, 17, 19 ವರ್ಷದೊಳಗಿನವರು, ಪುರುಷ, ಮಹಿಳೆ ಮತ್ತು ನಾನ್‌ ಮೆಡಲ್ಸ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.://..appನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ರೆಫರಿ ಕೆ.ಆರ್‌. ಮಂಜುನಾಥ್‌ (ಮೊಬೈಲ್ ಸಂಖ್ಯೆ98809 77827) ಅವರನ್ನು ಸಂಪರ್ಕಿಸಬೇಕು ಎಂದು ಕರ್ನಾಟಕ ಟೇಬಲ್ ಟೆನಿಸ್‌ ಸಂಸ್ಥೆ (ಕೆಟಿಟಿಎ) ಕಾರ್ಯದರ್ಶಿ ಟಿ.ಜಿ. ಉಪಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.