ಏಷ್ಯನ್ ಯೂತ್ ನೆಟ್‌ಬಾಲ್: ಭಾರತ ಶುಭಾರಂಭ ಜಿಯಾಂಜು, ಕೊರಿಯಾ: ಭಾರತ ಮಹಿಳಾ ತಂಡದವರು ಶನಿವಾರ ಇಲ್ಲಿ ಆರಂಭವಾದ ಏಷ್ಯನ್ ಯೂತ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು. ಮೊದಲ ಪಂದ್ಯದಲ್ಲಿ ಭಾರತ ಬಳಗವು 44–40ರಿಂದ ಥಾಯ್ಲೆಂಡ್ ವಿರುದ್ಧ ಜಯಿಸಿತು. ಭಾರತ ಬಳಗವು ಮೊದಲ ಕ್ವಾರ್ಟರ್‌ನಲ್ಲಿ 11–9 ಮುನ್ನಡೆ ಸಾಧಿಸಿತು. ಎರಡನೇ ಕ್ವಾರ್ಟರ್‌ನಲ್ಲಿ 13–13ರ ಸಮಬಲ, ಮೂರನೇ ಕ್ವಾರ್ಟರ್‌ನಲ್ಲಿ 12–10ರ ಮುನ್ನಡೆ ಗಳಿಸಿತು. ತುರುಸಿನ ಹೋರಾಟ ಕಂಡುಬಂದ ಕೊನೆಯ ಕ್ವಾರ್ಟರ್‌ನಲ್ಲಿ 8–8ರ ಸಮಬಲ ಸಾಧಿಸುವಲ್ಲಿ ಉಭಯ ತಂಡಗಳು ಯಶಸ್ವಿಯಾದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.