ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‌ನ ಥೀಮ್‌ ಲೋಗೊ ಮತ್ತು ಟೀಶರ್ಟ್ ಅನಾವರಣ ಬೆಂಗಳೂರು:ಡಿಸೆಂಬರ್ 10ರಂದು ಆರಂಭವಾಗುವ ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‌ನ ಥೀಮ್ ಲೋಗೊ ಮತ್ತು ಟೀಶರ್ಟ್‌ ಅನಾವರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ಬುಧವಾರ ನಡೆಯಿತು. ‘ಮತ್ತೆ ಮುಕ್ತವಾಗಿ ಓಡಿ‘ ಎಂಬುದು ಮ್ಯಾರಥಾನ್‌ನ ಥೀಮ್ ಆಗಿದೆ. ಅವಿನಾಶ್ ಸಬ್ಳೆ ಅವರು ಈ ಮ್ಯಾರಥಾನ್‌ನ ಪ್ರಚಾರ ರಾಯಭಾರಿಯಾಗಿದ್ದಾರೆ. ಥೀಮ್ ಲೋಗೊ ಮತ್ತು ಟೀಶರ್ಟ್‌ ಅನಾವರಣ ಸಂದರ್ಭದಲ್ಲಿ ಆರ್‌ಬಿಐಟಿಸಿ ಅಧ್ಯಕ್ಷೆ ಸೀಮಂತಿನಿ ದೇಸಾಯಿ, ಅಂತರರಾಷ್ಟ್ರೀಯ ಪ್ಯಾರಾ ಈಜುಪಟು ಸ್ವಪ್ನಿಲ್ ಸಂಜಯ್ ಪಾಟೀಲ್, ಜೀತೇಂದ್ರ ಅನೇಜಾ ಮತ್ತು ಬೆಂಗಳೂರು ಮಿಡ್‌ನೈಟ್‌ ಮ್ಯಾರಥಾನ್‌ ಚೇರ್ಮನ್‌ ವಿರಾಫ್ ಸುತಾರಿಯಾ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.