ಪಿಯು ಅಥ್ಲೆಟಿಕ್ಸ್‌: ಆಯುಷ್‌, ನಿಯೋಲ್ ಮಿಂಚಿನ ಓಟ ಮಂಗಳೂರು: ರೋಚಕ ಪೈಪೋಟಿಯಲ್ಲಿ ಮಿಂಚಿನ ಓಟ ಪ್ರದರ್ಶಿಸಿದ ನಗರದ ಕೆನರಾ ಕಾಲೇಜಿನ ಆಯುಷ್ ಆರ್‌.ದೇವಾಡಿಗ, ಪಿಯು ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ ಕೂಟದ ವೇಗದ ಓಟಗಾರ ಎನಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ನಿಯೋಲ್ ಅನಾ ಕಾರ್ನಿಲೊ ಮೊದಲಿಗರಾದರು. ನಗರದ ಕಾರ್‌ ಸ್ಟ್ರೀಟ್‌ನ ಬಾಲಕಿಯರ ಸರ್ಕಾರಿ ಕಾಲೇಜು ಆಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಕೂಟದ 100 ಮೀಟರ್ಸ್ ಓಟದಲ್ಲಿ ಗುರಿ ಮುಟ್ಟಲು ಆಯುಷ್‌ 11.40 ಸೆಕೆಂಡು ತೆಗೆದುಕೊಂಡರು. ಉಡುಪಿ ಜಿಲ್ಲೆಯ ಸುನಾಲ್ ಸುವರ್ಣ 11.44 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಯತಿನ್ ನಾಯಕ್‌ 11.47 ಸೆಕೆಂಡುಗಳಲ್ಲಿ ಗುರಿ ಸೇರಿ ಮೂರನೇ ಸ್ಥಾನವನ್ನು ಕೂಡ ಉಡುಪಿ ಜಿಲ್ಲೆಯ ಪಾಲಾಗಿಸಿದರು. ಬಾಲಕಿಯರ ವಿಭಾಗದಲ್ಲಿ ಉಡುಪಿಯ ಅಂಕಿತಾ ದೇವಾಡಿಗ ಮತ್ತು ಮೈಸೂರಿನ ಹರ್ಷಿತಾ ಎಚ್‌.ಎಸ್‌ ಅವರನ್ನು ಹಿಂದಿಕ್ಕಿ ನಿಯೋಲ್ 12.53 ಸೆಕೆಂಡುಗಳ ಸಾಧನೆ ಮಾಡಿದರು. ಅಂಕಿತಾ ಮತ್ತು ಹರ್ಷಿತಾ ಕ್ರಮವಾಗಿ 12.61 ಮತ್ತು 12.76 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮೊದಲ ದಿನ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಬೆಂಗಳೂರು ಮತ್ತು ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಪಾರಮ್ಯ ಮೆರೆದರು. ಫಲಿತಾಂಶಗಳು: ಬಾಲಕರ 100 ಮೀ ಓಟ: ಆಯುಷ್ ದೇವಾಡಿಗ (ದಕ್ಷಿಣ ಕನ್ನಡ)–1. ಕಾಲ:11.40 ಸೆ, ಸುನಾಲ್ ಸುವರ್ಣ (ಉಡುಪಿ)–2, ಯತಿನ್ ನಾಯಕ್ (ಉಡುಪಿ)–3; 800 ಮೀ ಓಟ: ರಮೇಶ್ (ಕೊಡಗು)–1. ಕಾಲ: 1 ನಿ 59.23 ಸೆ, ಭುವನ್ ಪೂಜಾರಿ (ಬೆಳಗಾವಿ)–2, ಲೋಕೇಶ್ (ಬೆಂಗಳೂರು ದಕ್ಷಿಣ)–3; 3000 ಮೀ ಓಟ: ರೋಹನ್ ಬೇಕಲ್‌ (ಬೆಂಗಳೂರು ದಕ್ಷಿಣ)–1. ಕಾಲ: 9 ನಿ 5.46 ಸೆ, ಹನುಮಂತ ವರಾಲ್ಯಗೋಳ (ಬಾಗಲಕೋಟೆ)–2, ಗಣಪತಿ ಎಲ್ಲಪ್ಪ ಮಲಿಕ್ (ದಕ್ಷಿಣ ಕನ್ನಡ)–3; 400 ಮೀ ಹರ್ಡಲ್ಸ್‌: ದರ್ಶನ್ (ಉಡುಪಿ)–1. ಕಾಲ: 55.78 ಸೆ, ಧ್ರುವ ಸೂರ್ಯ (ಬೆಂಗಳೂರು ಉತ್ತರ)–2, ತೇಜಸ್ (ಉಡುಪಿ)–3; ಹೈಜಂಪ್‌: ಶಶಾಂಕ್ ಬಿ (ಉಡುಪಿ)–1. ಎತ್ತರ: 1.93 ಮೀ, ಜಾಗೃತ್ ಇ.ಇ (ಬೆಂಗಳೂರು ದಕ್ಷಿಣ)–2, ಆದರ್ಶ್ ಶೆಟ್ಟಿ (ದಕ್ಷಿಣ ಕನ್ನಡ)–3; ಟ್ರಿಪಲ್ ಜಂಪ್: ಪುನೀತ್‌ ಎಸ್‌ (ಕೊಡಗು)–1. ಅಂತರ: 13.32 ಮೀ, ಶಿವಲಾರ್ ಎಸ್‌ (ಕೋಲಾರ)–2, ಮಂಜುನಾಥ ಶ್ರೀಶೈಲ (ದಕ್ಷಿಣ ಕನ್ನಡ)–3; ಶಾಟ್‌ ಪಟ್‌: ಗಣೇಶ್ ನಾಗಪ್ಪ ಗೌಡ (ದಕ್ಷಿಣ ಕನ್ನಡ)–1. ದೂರ: 15.57 ಮೀ, ಗಣೇಶ್ ಹಣಮಂತ (ದಕ್ಷಿಣ ಕನ್ನಡ)–2, ಅಜಿಯಾನ್ ವರೇಮಣಿ (ಧಾರವಾಡ)–3; ಜಾವೆಲಿನ್: ಶಶಾಂಕ್ ಪಾಟೀಲ್‌ (ಬೆಳಗಾವಿ)–1. ದೂರ: 61.32 ಮೀ, ಸ್ವರೂಪ್ ಎಚ್‌.ಎ (ದಕ್ಷಿಣ ಕನ್ನಡ)–2, ಕುಲದೀಪ್ ಕುಮಾರ್ (ಉಡುಪಿ)–3. ಬಾಲಕಿಯರ 100 ಮೀ ಓಟ: ನಿಯೋಲ್ ಅನಾ ಕಾರ್ನಿಲೊ (ಬೆಂಗಳೂರು ಉತ್ತರ)–1. ಕಾಲ: 12.53 ಸೆ, ಅಂಕಿತಾ ದೇವಾಡಿಗ (ಉಡುಪಿ)–2, ಹರ್ಷಿತಾ (ಮೈಸೂರು)–3; 800 ಮೀ ಓಟ: ಪ್ರಿಯಾಂಕಾ ಮಡಿವಾಳಪ್ಪ (ಬೆಂಗಳೂರು ಉತ್ತರ)–1. ಕಾಲ: 2 ನಿ 26.21 ಸೆ, ಋತುಶ್ರೀ (ದಕ್ಷಿಣ ಕನ್ನಡ)–2, ಶ್ರೀ ರಕ್ಷಾ (ಕೊಡಗು)–3; 3000 ಮೀ ಓಟ: ಪ್ರತಿಭಾ (ದಕ್ಷಿಣ ಕನ್ನಡ)–1. ಕಾಲ: 10 ನಿ 56.32 ಸೆ, ನಂದಿನಿ ಜಿ (ಉಡುಪಿ)–2, ಮಹಾಲಕ್ಷ್ಮಿ ಬಸಕಳಿ (ಬಾಗಲಕೋಟೆ)–3; 400 ಮೀ ಹರ್ಡಲ್ಸ್‌: ಅಮೂಲ್ಯ ಬಿ.ಎಂ (ದಕ್ಷಿಣ ಕನ್ನಡ)–1. ಕಾಲ: 1 ನಿ 6.2 ಸೆ, ಸಹನಾ ಜಿ.ಎಸ್‌ (ಕೊಡಗು)–2, ವೈಭವಿ ಭುಡರುಕ (ಬೆಳಗಾವಿ)–3; ಹೈಜಂಪ್: ಪಾವನ ಎನ್ (ಬೆಂಗಳೂರು ಉತ್ತರ)–1. ಎತ್ತರ: 1.60 ಮೀ, ಸಂಜನಾ ಯು.ಜೆ (ದಕ್ಷಿಣ ಕನ್ನಡ)–2, ಲಿನ್ಯಾ ಮೇರಿ (ಮೈಸೂರು)–3; ಡಿಸ್ಕಸ್‌ ಥ್ರೋ: ಪ್ರಾಂಜಲಿ ಎ (ದಕ್ಷಿಣ ಕನ್ನಡ)–1. ದೂರ: 39.85 ಮೀ, ರೆಯಾ ಎಸ್‌.ಕೆ (ಮೈಸೂರು)–2, ರೋಷನಿ (ದಕ್ಷಿಣ ಕನ್ನಡ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.