ಪ್ಯಾರಾ ಬ್ಯಾಡ್ಮಿಂಟನ್‌: ಮಂದೀಪ್‌, ನೇಹಲ್‌ಗೆ ಚಿನ್ನ ನವದೆಹಲಿ: ಭಾರತದ ಮಂದೀಪ್‌ ಕೌರ್‌ ಮತ್ತು ನೇಹಲ್‌ ಗುಪ್ತಾ ಅವರು ಪೆರುವಿನ ಲಿಮಾದಲ್ಲಿ ನಡೆದ ಪೆರು ಪ್ಯಾರಾ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಿನ್ನ ಗೆದ್ದರು. ಮಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಮಂದೀಪ್‌ ಅವರು 21–11, 21–11 ರಲ್ಲಿ ವಿಶ್ವ ಉಕ್ರೇನ್‌ನ ಆಟಗಾರ್ತಿ ವಿಶ್ವ ಚಾಂಪಿಯನ್‌ ಆಗಿರುವ ಒಕ್ಸಾನಾ ಕೊಜಿನಾ ಅವರಿಗೆ ಆಘಾತ ನೀಡಿದರು. ನೇಹಲ್‌ ಅವರು ಪುರುಷರ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದರು. ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 21–16, 21–14 ರಲ್ಲಿ ಫ್ರಾನ್ಸ್‌ನ ಮ್ಯಾಥ್ಯೂ ಥಾಮಸ್‌ ಅವರನ್ನು ಮಣಿಸಿದರು. ಡಬಲ್ಸ್‌ನಲ್ಲಿ ಬ್ರೆಜಿಲ್‌ನ ಯೊಹಾನ್ ಬ್ರೆನೊ ಜತೆಗೂಡಿ ಆಡಿದ ನೇಹಲ್ 21–16, 21–13 ರಲ್ಲಿ ರೆಂಜೊ ಡಿಕ್ವೆಜ್ ಮತ್ತು ಪೆಡ್ರೊ ಪ್ಯಾಬ್ಲೊ ಡಿ ವಿನೇಟಾ ಅವರನ್ನು ಸೋಲಿಸಿದರು. ಈ ಟೂರ್ನಿಯಲ್ಲಿ ಭಾರತ ತಂಡದವರು ಆರು ಚಿನ್ನ, ಒಂದು ಬೆಳ್ಳಿ ಮತ್ತು ಏಳು ಕಂಚು ಸೇರಿದಂತೆ ಒಟ್ಟು 14 ಪದಕಗಳನ್ನು ಗೆದ್ದುಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.