‘ಸೀಜಿಂಗ್‌ ದ ಅಪಾರ್ಚುನಿಟಿ’ ಕೃತಿ ಬಿಡುಗಡೆ ಬೆಂಗಳೂರು: ಹಾಕಿ ಕ್ರೀಡೆಯಲ್ಲಿ ಡ್ರ್ಯಾಗ್‌ಫ್ಲಿಕ್‌ ಪರಿಣತಿ ಕುರಿತು ವಿವರಿಸುವ, ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಮಾಜಿ ಹೈ ಪರ್ಫಾರ್ಮನ್ಸ್ ನಿರ್ದೇಶಕ ಸಜು ಜೋಸೆಫ್‌ ಅವರು ಬರೆದಿರುವ ಚೊಚ್ಚಲ ಕೃತಿ ‘ಸೀಜಿಂಗ್‌ ದ ಅಪಾರ್ಚುನಿಟಿ: ದ ಆರ್ಟಿಸ್ಟ್‌ ಗ್ಯಾಲರಿ ಫಾರ್‌ ಪೆನಾಲ್ಟಿ ಕಾರ್ನರ್‌ ಆ್ಯಂಡ್‌ ಡ್ರ್ಯಾಗ್‌ ಫ್ಲಿಕ್‘ ಕೆಎಸ್‌ಸಿಎಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿತು. ಪೆನಾಲ್ಟಿ ಕಾರ್ನರ್‌, ಡಿಫೆನ್ಸ್ ಮತ್ತಿತರ ಹಾಕಿ ಆಟದ ತಂತ್ರಗಳ ಕುರಿತು ಕೃತಿಯಲ್ಲಿ ವಿವರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.