ಬಿಡಬ್ಲ್ಯುಎಫ್‌ ವಿಶ್ವ ಫೈನಲ್; ಪ್ರಣಯ್ ಮೇಲೆ ಭರವಸೆ ಬ್ಯಾಂಕಾಕ್ (ಪಿಟಿಐ): ಪ್ರತಿಭಾನ್ವಿತ ಆಟಗಾರ ಎಚ್‌.ಎಸ್. ಪ್ರಣಯ್ ಬುಧವಾರದಿಂದ ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್ ಟೂರ್ ಫೈನಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಒಲಿಂಪಿಯನ್ ಪಿ.ವಿ. ಸಿಂಧು ಅವರು ಗಾಯಗೊಂಡಿರುವುದರಿಂದ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ಪ್ರಣಯ್ ಅವರೊಬ್ಬರೇ ಭಾರತದ ಅಭಿಯಾನವನ್ನು ನಡೆಸಲಿದ್ದಾರೆ. ಅವರು ಎ ಗುಂಪಿನಲ್ಲಿ ಆಡಲಿದ್ದಾರೆ. ಅದರಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್, ಜಪಾನ್‌ನ ಕೊಡೈ ನರೋಕಾ ಮತ್ತು ಚೀನಾದ ಲೂ ಗುವಾಂಗ್ ಜೂ ಅವರ ಸ್ಪರ್ಧೆಯನ್ನು ಎದುರಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.