ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌ ಬ್ಯಾಡ್ಮಿಂಟನ್: ಪ್ರಣಯ್‌ಗೆ ಸೋಲು ಬ್ಯಾಂಕಾಕ್‌: ಜಿದ್ದಾಜಿದ್ದಿ ಹೋರಾಟ ನಡೆಸಿದ ಭಾರತದ ಎಚ್‌.ಎಸ್‌. ಪ್ರಣಯ್‌ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ‘ಎ’ ಗುಂಪಿನ ಹಣಾಹಣಿಯಲ್ಲಿ ಪ್ರಣಯ್‌11-21, 21-9, 17-21ರಿಂದ ಜಪಾನ್‌ನ ಕೊಡಾಯ್‌ ನರವೊಕಾ ಎದುರು ಪರಾ ಭವ ಗೊಂಡರು. ಮೊದಲ ಗೇಮ್‌ ಕೈಚೆಲ್ಲಿದ ಬಳಿಕ ಮರುಹೋರಾಟ ನಡೆಸಿದ ಪ್ರಣಯ್‌ ಎರಡನೇ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದರು. ಆದರೆ ಮೂರು ಅನಗತ್ಯ ತಪ್ಪುಗಳು ನಿರ್ಣಾಯಕ ಗೇಮ್‌ನಲ್ಲಿ ಅವರ ಸೋಲಿಗೆ ಕಾರಣವಾದವು. ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಪ್ರಣಯ್‌ ಮುಂದಿನ ಪಂದ್ಯದಲ್ಲಿ ಚೀನಾದ ಲು ಗುವಾಂಗ್‌ ಜು ಅವರನ್ನು ಎದುರಿಸುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.