ಬಿಎಸಿ, ಡಾಲ್ಫಿನ್‌ಗೆ ಸಮಗ್ರ ಪ್ರಶಸ್ತಿ ಮಂಡ್ಯ: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ (ಬಿಎಸಿ) ಮತ್ತು ಡಾಲ್ಫಿನ್‌ ಅಕ್ವಟಿಕ್ಸ್‌ ತಂಡಗಳು ರಾಜ್ಯ ಶಾರ್ಟ್‌ಕೋರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡವು. ಪಿಇಟಿ ಈಜುಕೇಂದ್ರದಲ್ಲಿ ಶುಕ್ರವಾರ ಮುಕ್ತಾಯಗೊಂಡ ಕೂಟದ ಜೂನಿಯರ್‌ ವಿಭಾಗದಲ್ಲಿ ಬಿಎಸಿ ಒಟ್ಟು 816 ಪಾಯಿಂಟ್ಸ್‌ ಕಲೆಹಾಕಿತು. ಡಾಲ್ಫಿನ್‌ ಅಕ್ವಟಿಕ್ಸ್‌ (485) ಮತ್ತು ಗ್ಲೋಬಲ್‌ ಸ್ವಿಮ್‌ ಸೆಂಟರ್‌ (115) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡವು. ಸಬ್‌ ಜೂನಿಯರ್‌ ವಿಭಾಗದಲ್ಲಿ ಡಾಲ್ಫಿನ್‌ ತಂಡ 217 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರೆ, ಬಿಎಸಿ (170) ‘ರನ್ನರ್ಸ್‌ ಅಪ್‌’ ಆಯಿತು. ಡಿಕೆವಿ ಈಜುಕೇಂದ್ರ (93) ಮೂರನೇ ಸ್ಥಾನ ಗಳಿಸಿತು. ವೈಯಕ್ತಿಕ ಪ್ರಶಸ್ತಿ: ಬಾಲಕರ ವಿಭಾಗದಲ್ಲಿ ಕೃಷ್ಣ ನಂದಕುಮಾರ್‌ (ಪಿ.ಎಂ.ಈಜುಕೇಂದ್ರ, ಗುಂಪು–3), ಧ್ಯಾನ್‌ ಎಂ. (ಗ್ಲೋಬಲ್‌, ಗುಂಪು–1) ಮತ್ತು ಅಕ್ಷಜ್‌ ಠಾಕೂರಿಯ (ಡಾಲ್ಫಿನ್‌, ಗುಂಪು–2), ಬಾಲಕಿಯರ ವಿಭಾಗದಲ್ಲಿ ಮೀರಾ ನಂಬಿಯಾರ್‌ (ಡಾಲ್ಫಿನ್‌, ಗುಂಪು–3), ನೈಶಾ ಶೆಟ್ಟಿ (ಡಾಲ್ಫಿನ್‌, ಗುಂಪು–1) ಹಾಗೂ ನೈಶಾ (ಬಿಎಸಿ, ಗುಂಪು–2) ಅವರು ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ಫಲಿತಾಂಶ: ಬಾಲಕರ ವಿಭಾಗ: ಗುಂಪು–1: 400 ಮೀ. ಮೆಡ್ಲೆ: ಪವನ್‌ ಧನಂಜಯ (ಬಿಎಸಿ, 4 ನಿ. 51.81 ಸೆ.)–1 25 ಮೀ. ಫ್ರೀಸ್ಟೈಲ್‌: ಧ್ಯಾನ್‌ ಎಂ. (ಗ್ಲೋಬಲ್‌, ಕಾಲ: 11.26 ಸೆ.)–1, ರಿಷಭ್‌ ಸಿಂಗ್‌ (ಡಾಲ್ಫಿನ್‌)–2, ಬಾಸಿತ್‌ ಅಹ್ಮದ್ (ಬಿಸಿಎಸ್‌ ಎಂಇಜಿ)–3 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಬಾಸಿತ್‌ ಅಹ್ಮದ್ (ಬಿಎಸ್‌ಸಿ ಎಂಇಜಿ, ಕಾಲ: 31.06 ಸೆ.)–1, ಸೂರ್ಯ ಜೋಯಪ್ಪ (ಬಿಎಸಿ)–2, ಸುಯೋಗ್‌ ಎಲ್‌.ಗೌಡ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3 200 ಮೀ. ಬ್ಯಾಕ್‌ಸ್ಟ್ರೋಕ್‌: ಆಕಾಶ್‌ ಮಣಿ (ಬಿಎಸಿ, ಕಾಲ: 2 ನಿ. 11.35 ಸೆ.)–1, ಅಂಕಿತ್‌ ಭಟ್ (ಡಾಲ್ಫಿನ್‌)–2, ಡಿ.ಜ್ಞಾನ್ (ಮಂಗಳಾ ಈಜು ಕ್ಲಬ್‌)–3 100 ಮೀ. ಫ್ರೀಸ್ಟೈಲ್‌: ಧ್ಯಾನ್‌ ಎಂ. (ಗ್ಲೋಬಲ್‌, ಕಾಲ: 53.59 ಸೆ.)–1, ತರುಣ್‌ ಅರುಣ್‌ ಗೌಡ (ಬಿಎಸಿ)–2, ಸ್ವಯಂ ಎ. (ಬಿಎಸಿ)–3 4X50 ಮೀ. ಮೆಡ್ಲೆ: ಬಿಎಸಿ (ಕಾಲ: 1 ನಿ.50.80 ಸೆ.)–1, ಬಿಎಸ್‌ಸಿ ಎಂಇಜಿ–2, ಪಿ.ಎಂ.ಈಜು ಕೇಂದ್ರ–3 ಗುಂಪು–2: 400 ಮೀ. ಮೆಡ್ಲೆ: ರಾಘವ್‌ ಸ್ವಚ್ಛಂದಮ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ, ಕಾಲ: 4 ನಿ.56.60 ಸೆ.)–1, ಸೂರ್ಯ ಜೆ.ಟಿ (ಬಿಎಸಿ)–2, ದಕ್ಷ್‌ ಮಠ (ಬಿಎಸಿ)–3 25 ಮೀ. ಫ್ರೀಸ್ಟೈಲ್‌: ಅಕ್ಷಜ್‌ ಠಾಕೂರಿಯ (ಡಾಲ್ಫಿನ್‌, ಕಾಲ: 12.60 ಸೆ.)–1, ಷಣ್ಮುಖ್‌ ಎಂ.ಜಿ (ಬಿಎಸಿ)–2, ದಕ್ಷಣ್‌ ಎಸ್‌. (ಬಿಎಸಿ)–3 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಅನ್ಶುಲ್‌ ಕುಮಾರ್‌ ನಿಶಾದ್ (ಬಿಎಸ್‌ಸಿ ಎಂಇಜಿ, ಕಾಲ: 32.51 ಸೆ.)–1, ವಿಶಾಖನ್ ಸವರಣನ್ (ಬಿಎಸಿ)–2, ದಕ್ಷ್ ಮಠ (ಬಿಎಸಿ)–3 200 ಮೀ. ಬ್ಯಾಕ್‌ಸ್ಟ್ರೋಕ್‌: ಅಮನ್‌ ಸುಂಗರ್‌ (ಸ್ವಿಮ್ಮರ್ಸ್‌ ಕ್ಲಬ್‌ ಬೆಳಗಾವಿ, ಕಾಲ: 2 ನಿ. 13.23 ಸೆ.)–1, ಸೂರ್ಯ ಜೆ.ಟಿ (ಬಿಎಸಿ)–2, ವೇದಾಂತ ವಿ.ಎಂ. (ಬಿಎಸಿ)–3 100 ಮೀ. ಫ್ರೀಸ್ಟೈಲ್‌: ಅಕ್ಷತ್‌ ಠಾಕೂರಿಯ (ಡಾಲ್ಫಿನ್‌, ಕಾಲ: 57.24 ಸೆ.)–1, ರೇಣುಕಾಚಾರ್ಯ ಹೊದ್ಮನಿ (ಬಿಎಸಿ)–2, ನಿಶಾನ್‌ (ಡಾಲ್ಫಿನ್‌)–3 4X50 ಮೀ. ಮೆಡ್ಲೆ: ಬಿಎಸಿ ‘ಬಿ’ (ಕಾಲ: 1 ನಿ. 59.25 ಸೆ.)–1, ಬಿಎಸಿ ‘ಎ’–2, ಡಾಲ್ಫಿನ್‌ ‘ಎ’–3 ಬಾಲಕಿಯರ ವಿಭಾಗ: ಗುಂಪು–1: 400 ಮೀ. ಮೆಡ್ಲೆ: ಅನ್ಶು ದೇಶಪಾಂಡೆ (ಡಾಲ್ಫಿನ್‌, ಕಾಲ: 5 ನಿ. 36.84 ಸೆ.)–1, ಅಂಜನಾ ಶಿವಕುಮಾರ್‌ (ಬಿಎಸಿ)–2 25 ಮೀ. ಫ್ರೀಸ್ಟೈಲ್‌: ಲಕ್ಷ್ಮಿ ತ್ರಿವಕ್ರಮ್‌ ನಿಕಂ (ಬಿಎಸಿ, ಕಾಲ: 13.14 ಸೆ.)–1, ಸಾಕ್ಷಿ ಎಸ್‌.ದ್ಯಾಮನ್ನವರ್‌ (ಡಾಲ್ಫಿನ್‌)–2, ವರ್ಷಾ ಪಿ. ಶ್ರೀಯಾನ್ (ಬಿಎಸಿ)–3 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಮೇಘಾಂಜಲಿ (ಗ್ಲೋಬಲ್‌, ಕಾಲ: 37.16 ಸೆ.)–1, ಆರಾಧನಾ ಎಸ್‌.ಗೌಡ (ಡಾಲ್ಫಿನ್‌)–2, ವರ್ಷಾ ಪಿ.ಶ್ರೀಯಾನ್ (ಬಿಎಸಿ)–3 200 ಮೀ. ಬ್ಯಾಕ್‌ಸ್ಟ್ರೋಕ್‌: ಆರುಷಿ ಅಗರವಾಲ್ (ಡಾಲ್ಫಿನ್‌, ಕಾಲ: 2 ನಿ. 29.35ಸೆ.)–1, ಅಂಬರ್‌ ಜೆ. ಸಿಂಗ್ (ಡಾಲ್ಫಿನ್‌)–2, ಶ್ರುತಿ ಕೆ.ಆರ್‌. (ಗ್ಲೋಬಲ್‌)–3 100 ಮೀ. ಫ್ರೀಸ್ಟೈಲ್‌: ಲಕ್ಷ್ಮಿ ತ್ರಿವಿಕ್ರಮ್ ನಿಕಂ (ಬಿಎಸಿ, ಕಾಲ: 1 ನಿ. 00.34 ಸೆ.)–1, ಸಾಕ್ಷಿ ಎಸ್‌.ದ್ಯಾಮನ್ನವರ್‌ (ಡಾಲ್ಫಿನ್‌)–2, ಎಂ.ವಿ.ರಿಷಿಕಾ (ಸೌಂದರ್ಯಾ ಈಜು ಕೇಂದ್ರ)–3 ಗುಂಪು–2: 400 ಮೀ. ಮೆಡ್ಲೆ: ಸಬಾ ಸುಹಾನಾ (ಡಾಲ್ಫಿನ್‌ ಅಕ್ವಟಿಕ್ಸ್‌, ಕಾಲ: 5 ನಿ. 22.16 ಸೆ.)–1. ತಾನ್ಯಾ ಎಸ್‌. (ಡಾಲ್ಫಿನ್‌)–2, ನೈಶಾ (ಬಿಎಸಿ)–3 25 ಮೀ. ಫ್ರೀಸ್ಟೈಲ್‌: ನೈಶಾ (ಬಿಎಸಿ, ಕಾಲ: 13.49 ಸೆ.)–1, ಚಾರಣಿ ತುಮು (ಗ್ಲೋಬಲ್‌)–2, ಆರ್ನ ಎಂ.ಪಿ. (ಬಿಎಸಿ)–3 50 ಮೀ. ಬ್ರೆಸ್ಟ್‌ಸ್ಟ್ರೋಕ್‌: ತಾನ್ಯಾ ಎಸ್‌. (ಡಾಲ್ಫಿನ್‌, ಕಾಲ: 36.69 ಸೆ.)–1, ರಿಯಾನಾ ಧೃತಿ ಫೆರ್ನಾಂಡಿಸ್‌ (ಡಾಲ್ಫಿನ್‌)–2, ಮಿಹಿಕಾ ದತ್ತಾ (ಡಾಲ್ಫಿನ್‌)–3 200 ಮೀ. ಬ್ಯಾಕ್‌ಸ್ಟ್ರೋಕ್‌: ನೈಶಾ, (ಕಾಲ: 2 ನಿ. 30.81 ಸೆ.)–1, ತಾನ್ಯಾ ಎಂ.ಎನ್‌–2, ನಕ್ಷತಾ ಗೌತಮ್‌–3 (ಎಲ್ಲರೂ ಬಿಎಸಿ) 100 ಮೀ. ಫ್ರೀಸ್ಟೈಲ್‌: ಆರ್ನ ಎಂ.ಪಿ. (ಬಿಎಸಿ, ಕಾಲ: 1 ನಿ. 01.38 ಸೆ.)–1, ತಿಸ್ಯಾ ಸೋನರ್‌ (ಬಿಎಸಿ)–2, ಸುಹಾಸಿನಿ ಘೋಷ್‌ (ಡಾಲ್ಫಿನ್‌)–3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.