ಕಬಡ್ಡಿ: ವೆಲ್ಸ್ ವಿವಿಗೆ ಪ್ರಶಸ್ತಿ ಬೆಂಗಳೂರು: ಚೆನ್ನೈನ ವೆಲ್ಸ್ ವಿವಿ ತಂಡವು ಇಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಪುರುಷರ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ವಿಶ್ವವಿದ್ಯಾಲಯಗಳ ಸಂಘ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕೋರಮಂಗಲದ ಸಂತ ಫ್ರಾನ್ಸಿಸ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ವೆಲ್ಸ್ ತಂಡವು ಮಂಗಳೂರು ವಿವಿ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು. ಚೆನ್ನೈನ ಎಸ್‌ಆರ್‌ಎಂಐಎಸ್‌ಟಿ ವಿವಿ ತಂಡ ಮೂರನೇ ಮತ್ತು ಮೈಸೂರು ವಿವಿ ತಂಡಗಳು ನಾಲ್ಕನೇ ಸ್ಥಾನ ಪಡೆದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.