ರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್‌ಷಿಪ್‌: ಕರ್ನಾಟಕ-ತಮಿಳುನಾಡು ಫೈನಲ್ ಹಾಸನ: ಇಲ್ಲಿನ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಡಾಡ್ಜ್ ಬಾಲ್ ಚಾಂಪಿಯನ್‌ಷಿಪ್‌ ನಸಬ್‌ಜೂನಿಯರ್ಸ್‌ ವಿಭಾಗದಲ್ಲಿ ಬುಧವಾರ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಫೈನಲ್‌ ಪ್ರವೇಶಿಸಿದವು. ಸೆಮಿಫೈನಲ್‌ ಪಂದ್ಯಗಳಲ್ಲಿ ರಾಜ್ಯ ತಂಡವು ಕೇರಳವನ್ನು ಮಣಿಸಿದರೆ, ತಮಿಳುನಾಡು ತಂಡದವರು ಪುದುಚೇರಿ ವಿರುದ್ಧ ಗೆದ್ದು ಅಂತಿಮ ಘಟ್ಟಕ್ಕೆ ಅರ್ಹತೆ ಪಡೆದರು. ಪುರುಷರ ಸೀನಿಯರ್ಸ್ ವಿಭಾಗದಲ್ಲಿ ಕರ್ನಾಟಕ– ಮಹಾರಾಷ್ಟ್ರ, ಆಂಧ್ರಪ್ರದೇಶ– ತಮಿಳುನಾಡು ಹಾಗೂ ಮಹಿಳೆಯರ ಸೀನಿಯರ್ಸ್‌ ವಿಭಾಗದಲ್ಲಿ ಮಹಾರಾಷ್ಟ್ರ –ತಮಿಳುನಾಡು, ಕರ್ನಾಟಕ– ಆಂಧ್ರಪ್ರದೇಶ, ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು, ಕರ್ನಾಟಕ ಮತ್ತು ಕೇರಳ ನಡುವೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಡಿ.29ರಂದು ಈ ಹಣಾಹಣಿಗಳು ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.