ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಗೆ ಲವ್ಲಿನಾ ಭೋಪಾಲ್‌: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಲವ್ಲಿನಾ ಬೊರ್ಗೊಹೈನ್ ಅವರು ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಎಂಟರಘಟ್ಟ ಪ್ರವೇಶಿಸಿದ್ದಾರೆ. ಅಸ್ಸಾಂ ರಾಜ್ಯವನ್ನು ಪ್ರತಿನಿಧಿಸಿರುವ ಲವ್ಲಿನಾ (75 ಕೆಜಿ ವಿಭಾಗ) ನಿರೀಕ್ಷೆಯಂತೆ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಒಡಿಶಾದ ಪೂಜಾ ನಾಯಕ್ ವಿರುದ್ಧ ಗೆದ್ದರು. ನಿರಂತರ ಆಕ್ರಮಣ ಮತ್ತು ಬಲಿಷ್ಠ ಪಂಚ್‌ಗಳ ಮೂಲಕ ಲವ್ಲಿನಾ ಎದುರಾಳಿಯನ್ನು ಕಂಗೆಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.