ಗಾಲ್ಫ್‌: ಚಿಕ್ಕರಂಗಪ್ಪಗೆ ಪ್ರಶಸ್ತಿ ಜಮ್ಶೆಡ್‌ಪುರ (ಪಿಟಿಐ): ಬೆಂಗಳೂರಿನ ಎಸ್‌.ಚಿಕ್ಕರಂಗಪ್ಪ ಅವರು ಶನಿವಾರ ಇಲ್ಲಿ ಕೊನೆಗೊಂಡ ಟಾಟಾ ಸ್ಟೀಲ್‌ ಟೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಶನಿವಾರ ನಡೆದ ಅಂತಿಮ ಸುತ್ತಿನಲ್ಲಿ 69 ಶಾಟ್‌ಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿದ ಅವರು ನಾಲ್ಕು ಸುತ್ತುಗಳಲ್ಲಿ ಒಟ್ಟು 268 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. 29 ವರ್ಷದ ಚಿಕ್ಕರಂಪ್ಪ, ಪಿಜಿಟಿಐನಲ್ಲಿ ಗೆದ್ದ 15ನೇ ಪ್ರಶಸ್ತಿ ಇದು. ಶಿವ ಕಪೂರ್‌, ದೆಹಲಿಯ ಶಮೀಮ್‌ ಖಾನ್‌ ಮತ್ತು ಗುರುಗ್ರಾಮ್‌ನ ವೀರ್‌ ಅಹ್ಲಾವತ್‌ (ಎಲ್ಲರೂ ತಲಾ 270) ಅವರು ಜಂಟಿ ಎರಡನೇ ಸ್ಥಾನ ಪಡೆದುಕೊಂಡರು. ‘ಈ ವರ್ಷ ನನಗೆ ತುಂಬಾ ಕಠಿಣವಾಗಿತ್ತು. ವರ್ಷದ ಆರಂಭದಲ್ಲೇ ತಾಯಿಯನ್ನು ಕಳೆದುಕೊಂಡೆ. ಇದರಿಂದ ಗಾಲ್ಫ್ ಆಟ ಅನಂದಿಸಲು ತುಂಬಾ ಕಷ್ಟವಾಗುತ್ತಿತ್ತು. ಆದರೂ ಸಾಧ್ಯವಾದಷ್ಟು ಟೂರ್ನಿಗಳಲ್ಲಿ ಪಾಲ್ಗೊಂಡೆ. ಈ ಗೆಲುವನ್ನು ತಾಯಿಗೆ ಅರ್ಪಿಸುತ್ತೇನೆ’ ಎಂದು ಚಿಕ್ಕರಂಗಪ್ಪ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.