2023: ಭಾರತ - ಇಂಗ್ಲೆಂಡ್ ಪಂದ್ಯ ಡ್ರಾ ರೂರ್ಕೆಲಾ: ಒಡಿಶಾದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಭಾನುವಾರ ನಡೆದ ಪಂದ್ಯವು ಗೋಲುರಹಿತ ಡ್ರಾದಲ್ಲಿ ಅಂತ್ಯಗೊಂಡಿದೆ. 'ಡಿ' ಗುಂಪಿನ ಎರಡನೇ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡದ ಸವಾಲು ಎದುರಾಗಿತ್ತು. ಆದರೆ ಚುರುಕಿನ ಪ್ರದರ್ಶನ ನೀಡಿದ ಹರ್ಮನ್‌ಪ್ರೀತ್ ಸಿಂಗ್ ಬಳಗವು ಎದುರಾಳಿ ತಂಡಕ್ಕೆ ನಿಕಟ ಪೈಪೋಟಿ ಒಡ್ಡುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ವಿಶ್ವಕಪ್ ಹಾಕಿ: ರೋಹಿದಾಸ್ – ಹಾರ್ದಿಕ್ ಮಿಂಚು, ಭಾರತ ತಂಡದ ಶುಭಾರಂಭ ಪಂದ್ಯದ ನಾಲ್ಕು ಕ್ವಾರ್ಟರ್‌ನಲ್ಲೂ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. ಆದರೆ ಉಭಯ ತಂಡಗಳಿಗೂ ಲಭಿಸಿದ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. , . 🏴󠁧󠁢󠁥󠁮󠁧󠁿 0:0 🇮🇳# # #HWC2023 # # @CMO_Odisha @sports_odisha @ @Media_SAI @FIH_Hockey @ ../UZGj7xDvfC ಎರಡನೇ ಸ್ಥಾನದಲ್ಲಿ ಭಾರತ... ಇಂಗ್ಲೆಂಡ್ ವಿರುದ್ಧದ ಡ್ರಾ ಫಲಿತಾಂಶದೊಂದಿಗೆ ಸದ್ಯ ನಾಲ್ಕು ಅಂಕ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಅಂಕಗಳನ್ನು ಹೊಂದಿರುವ ಇಂಗ್ಲೆಂಡ್, ಗೋಲುಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಭಾರತ 2-0 ಗೋಲುಗಳ ಅಂತರದ ಗೆಲುವು ಸಾಧಿಸಿತ್ತು. ಜನವರಿ 19ರಂದು ಗುಂಪು ಹಂತದ ಕೊನೆಯ ಹಂತದಲ್ಲಿ ಭಾರತ ತಂಡವು ವೇಲ್ಸ್ ಸವಾಲನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.