ಬಾಲ್ ಬ್ಯಾಡ್ಮಿಂಟನ್: ಪ್ರೀ ಕ್ವಾರ್ಟರ್ ಫೈನಲ್‌ಗೆ ಆಚಾರ್ಯ, ಕೇರಳ ಉಪ್ಪಿನಂಗಡಿ (ದಕ್ಷಿಣ ಕನ್ನಡ): ಕೇರಳ ವಿವಿ, ತಮಿಳುನಾಡು ಚಿದಂಬರಂನ ಅಣ್ಣಾಮಲೈ ವಿವಿ ಮತ್ತು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿ ತಂಡಗಳು ಮಂಗಳೂರು ವಿವಿ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಚೆನ್ನೈನ ಅಣ್ಣಾ ವಿವಿ, ತಮಿಳುನಾಡು ತಿರುಚಿನಾಪಳ್ಳಿಯ ಭಾರತಿದಾಸನ್ ವಿವಿ, ಮದ್ರಾಸ್‌ ವಿವಿ, ಸೇಲಂನ ಪೆರಿಯಾರ್ ವಿವಿ ಮತ್ತು ಕೊಯಮತ್ತೂರಿನ ಭಾರತಿಯಾರ್ ವಿವಿಗಳು ಕೂಡ 16ರ ಘಟ್ಟಕ್ಕೆ ಲಗ್ಗೆ ಇರಿಸಿವೆ. ಎರಡನೇ ದಿನವಾದ ಭಾನುವಾರ ಕಣದಲ್ಲಿದ್ದ ಕರ್ನಾಟಕದ 8 ವಿಶ್ವವಿದ್ಯಾಲಯಗಳು ಕೂಡ ನಿರಾಸೆ ಕಂಡವು. ಕಳೆದ ಬಾರಿ ಮೂರನೇ ಸ್ಥಾನ ಗಳಿಸುವ ಮೂಲಕ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಆತಿಥೇಯ ಮಂಗಳೂರು ವಿವಿ ಮೇಲೆ ಈಗ ನಿರೀಕ್ಷೆಯ ಭಾರ ಇದೆ. ಸೋಮವಾರ ಆಚಾರ್ಯ ನಾಗಾರ್ಜುನ ಮತ್ತು ಅಣ್ಣಾಮಲೈ ವಿವಿ ನಡುವಿನ ಪಂದ್ಯದಲ್ಲಿ ಗೆದ್ದ ತಂಡವನ್ನು ಮಂಗಳೂರು ವಿವಿ ಎದುರಿಸಲಿದೆ. ಭಾನುವಾರ ನಡೆದ ನಾಕೌಟ್ ಹಂತದ ಕೊನೆಯ ಪಂದ್ಯಗಳಲ್ಲಿ ಕೇರಳ ವಿವಿ ತಂಡ ಮಧುರೈ ಕಾಮರಾಜ್ ವಿವಿಯನ್ನು 27-35, 35-30, 35-20ರಲ್ಲಿ ಮಣಿಸಿತು. ಅಣ್ಣಾಮಲೈ ವಿವಿ ಕೋಟಯಂನ ಎಂ.ಜಿ ವಿವಿಯನ್ನು 35-25, 35-28ರಲ್ಲಿ ಮಣಿಸಿತು. ತಿರುನಲ್ವೇಲಿಯ ಎಂ.ಎಸ್‌ ವಿವಿಯನ್ನು ಆಚಾರ್ಯ ನಾಗಾರ್ಜುನ 35-33, 35-28ರಲ್ಲಿ ಸೋಲಿಸಿತು. ಬೆಳಗಾವಿಯ ವಿಟಿಯು 35-21, 35-24ರಲ್ಲಿ ಅಣ್ಣಾ ವಿವಿಗೆ ಮಣಿಯಿತು. ಭಾರತಿದಾಸನ್ ಎದುರು ಕೃಷ್ಣಾ ವಿವಿ 35-33, 35-20ರಲ್ಲಿ ಸೋತಿತು. ಕಾಕಿನಾಡದ ಜೆಎನ್‌ಟಿಯು 35-23, 35-21ರಲ್ಲಿ ಮದ್ರಾಸ್‌ ವಿವಿಗೆ ಮಣಿಯಿತು. ಪೆರಿಯಾರ್ ವಿವಿ 35-28, 35-25ರಲ್ಲಿ ಮುಂಬೈ ವಿವಿಯನ್ನು ಮತ್ತು ಭಾರತಿಯಾರ್ 35-20, 35-15ರಲ್ಲಿ ಆದಿಕವಿ ನಾಣಯ್ಯ ವಿವಿಯನ್ನು ಸೋಲಿಸಿತು. ಎರಡನೇ ದಿನದ ಇತರ ನಾಕೌಟ್ ಪಂದ್ಯಗಳ ಫಲಿತಾಂಶ: ಬೆಂಗಳೂರಿನ ಆರ್‌ಜಿಯುಎಚ್‌ಎಸ್‌ ವಿರುದ್ಧ ಕಣ್ಣೂರು ವಿವಿಗೆ 35-16, 35-17ರಲ್ಲಿ, ಬೆಂಗಳೂರಿನ ಯುಎಎಸ್‌ ವಿರುದ್ಧ ಕಾಕಿನಾಡದ ಜೆಎನ್‌ಟಿಯುಗೆ 31-35, 35-25, 35-33ರಲ್ಲಿ, ಮೈಸೂರು ವಿವಿ ಎದುರು ಬೆಂಗಳೂರು ವಿವಿಗೆ 35-30, 35-24ರಲ್ಲಿ, ತಿರುವಳ್ಳುವರ್‌ ವಿವಿ ವಿರುದ್ಧ ಮಹಾರಾಜ ಗಂಗಾಸಿಂಗ್‌ ವಿವಿಗೆ 38-36, 35-33ರಲ್ಲಿ, ಡಾ.ಬಿಎಎಂ ವಿವಿ ವಿರುದ್ಧ ಉತ್ಕಲ್ ವಿವಿಗೆ 35-17, 35-21ರಲ್ಲಿ, ಮುಂಬೈ ವಿವಿ ವಿರುದ್ಧ ಮಂಡ್ಯ ವಿವಿಗೆ 35-32, 23-35, 35-32ರಲ್ಲಿ, ವಿಜಯನಗರ ವಿವಿ ವಿರುದ್ಧ ಶ್ರೀ ವೆಂಕಟೇಶ್ವರ ವಿವಿಗೆ 35-26, 35-18ರಲ್ಲಿ, ಎಸ್‌ಆರ್‌ಟಿಎಂ ವಿರುದ್ಧ ಯೋಗಿ ವೇಮನ ವಿವಿಗೆ 35-25, 35-24ರಲ್ಲಿ, ರಾಯಲಸೀಮ ವಿರುದ್ಧ ಕೇರಳ ವಿವಿಗೆ 35-30, 35-28ರಲ್ಲಿ ಜಯ. ಕಾಕಾತಿಯ ವಿವಿ ವಿರುದ್ಧ ಮಧುರೈ ಕಾಮರಾಜ್‌ ವಿವಿಗೆ 35-29, 35-25ರಲ್ಲಿ, ಗೊಂಡ್ವಾನ ವಿವಿ ವಿರುದ್ಧ ಬೆಳಗಾವಿಯ ವಿಟಿಯುಗೆ 35-17, 35-21ರಲ್ಲಿ, ಶ್ರೀ ವೆಂಕಟೇಶ್ವರ ವಿವಿ ವಿರುದ್ಧ ಕೃಷ್ಣಾ ವಿವಿಗೆ 35-29, 34-36, 35-24ರಲ್ಲಿ, ಶಿವಮೊಗ್ಗದ ಕೆಎಸ್‌ಎನ್‌ಯುಎಎಚ್‌ಎಸ್‌ ವಿರುದ್ಧ ಆಚಾರ್ಯ ನಾಗಾರ್ಜುನ ವಿವಿ ವಿರುದ್ಧ 35-26, 35-24ರಲ್ಲಿ, ವಿಕ್ರಮಸಿಂಹಪುರಿ ವಿವಿ ವಿರುದ್ಧ ಎಂ.ಎಸ್‌.ವಿವಿಗೆ 28-35, 35-19, 35-31ರಲ್ಲಿ, ಮಹಾರಾಜ ಗಂಗಾಸಿಂಗ್‌ ವಿವಿ ವಿರುದ್ಧ ಎಂ.ಜಿ ವಿಗೆ 35-24, 39-37ರಲ್ಲಿ, ‌ವಿನಾಯಕ ಮಿಷನ್‌ ವಿವಿ ವಿರುದ್ಧ ಅಣ್ಣಾ ವಿವಿಗೆ 35-18, 35-24ರಲ್ಲಿ, ಭಗಲ್‌ಪುರ್‌ ವಿರುದ್ಧ ಭಾರತಿದಾಸನ್ ವಿವಿಗೆ 35-18, 35-19ರಲ್ಲಿ ಮತ್ತು ಕಣ್ಣೂರು ವಿವಿ ವಿರುದ್ಧ ಅಣ್ಣಾಮಲೈ ವಿವಿಗೆ 35-13, 35-18ರಲ್ಲಿ ಗೆಲುವು. ತುಮಕೂರು ವಿವಿ ವಿರುದ್ಧ ಎಸ್‌ಕೆ ವಿವಿಗೆ 35-21, 35-28ರಲ್ಲಿ, ಕ್ಯಾಲಿಕಟ್ ವಿವಿ ವಿರುದ್ಧ ಪೆರಿಯಾರ್ ವಿವಿಗೆ 35-31, 35-27ರಲ್ಲಿ, ಮುಂಬೈ ವಿವಿ ವಿರುದ್ಧ ಪೆರಿಯಾರ್‌ ವಿವಿಗೆ 35-28, 35-25ರಲ್ಲಿ, ಎಂ.ಎಸ್‌ ವಿವಿ ವಿರುದ್ಧ ಆಚಾರ್ಯ ನಾಗಾರ್ಜುನ ವಿವಿಗೆ 35-33, 35-28ರಲ್ಲಿ, ಯೋಗಿ ವೇಮನ ವಿವಿ ವಿರುದ್ಧ ಭಾರತಿಯಾರ್ ವಿವಿಗೆ 35-19, 35-25ರಲ್ಲಿ, ಬಿಎಎಂ ವಿವಿ ವಿರುದ್ಧ ಕ್ಯಾಲಿಕಟ್‌ ವಿವಿಗೆ 35-18, 35-20ರಲ್ಲಿ, ಬೆಂಗಳೂರು ವಿವಿ ವಿರುದ್ಧ ಆದಿಕವಿ ನಾಣಯ್ಯ ವಿವಿಗೆ 35-29, 35-19ರಲ್ಲಿ ಗೆಲುವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.