ಬಾಕ್ಸಿಂಗ್: ಕೌಶಿಕ್‌, ತೋಕಾಸ್‌ ಶುಭಾರಂಭ ಹಿಸಾರ್‌: ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಮನೀಶ್‌ ಕೌಶಿಕ್, ರೈಲ್ವೆಯ ಬಾಕ್ಸರ್‌ಗಳಾದ ರೋಹಿತ್‌ ತೋಕಾಸ್‌ ಮತ್ತು ಸಚಿನ್‌ ಅವರು ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು. ಶನಿವಾರ ಆರಂಭವಾದ ಟೂರ್ನಿಯ 63.5 ಕೆ.ಜಿ ವಿಭಾಗದಲ್ಲಿ ಕೌಶಿಕ್‌ ಅವರು ಮಧ್ಯಪ್ರದೇಶದ ಪ್ರಭಾತ್‌ ದ್ವಿವೇದಿ ವಿರುದ್ಧ ಸುಲಭವಾಗಿ ಗೆದ್ದರು. 16ರ ಘಟ್ಟದ ಹಣಾಹಣಿಯಲ್ಲಿ ಅವರು ಆಂಧ್ರ ಪ್ರದೇಶದ ಸಂದೀಪ್‌ ಅವರ ಸವಾಲು ಎದುರಿಸುವರು. ತೋಕಾಸ್‌ ಅವರು 67 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಉತ್ತರಾಖಂಡ್‌ನ ರಾಹುಲ್‌ ಅವರನ್ನು ಮಣಿಸಿದರು. 57 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಸಚಿನ್‌ 5–0 ರಲ್ಲಿ ರಮಣ್‌ ಶರ್ಮಾ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.