ಕೊಕ್ಕೊ: ಚಿತ್ರಕೂಟ ಶಾಲಾ ತಂಡಗಳಿಗೆ ಪ್ರಶಸ್ತಿ ಬೆಂಗಳೂರು: ಇಲ್ಲಿಯ ಚಿತ್ರಕೂಟ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡಗಳು ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ. ಫೈನಲ್‌ ಪಂದ್ಯದಲ್ಲಿ ಬಾಲಕಿಯರ ತಂಡವು ಇನಿಂಗ್ಸ್ ಹಾಗೂ ಮೂರು ಪಾಯಿಂಟ್ಸ್‌ನಿಂದ ಕೇರಳದ ವ್ಯಾಸ ಸ್ಕೂಲ್ ಎದುರು ಗೆದ್ದಿತು. ಬಾಲಕರ ತಂಡವು 2 ಪಾಯಿಂಟ್ಸ್ ಅಂತರದಿಂದ ಪಂಜಾಬ್‌ನ ದೇವರಾಜ್ ದೇವ್‌ ಪಬ್ಲಿಕ್ ಸ್ಕೂಲ್ ವಿರುದ್ಧ ಜಯಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.