ಗಾಲ್ಫ್‌: ಅವನಿ ಪ್ರಶಾಂತ್‌ಗೆ 6ನೇ ಸ್ಥಾನ ಮೆಲ್ಬರ್ನ್‌: ಯುವ ಆಟಗಾರ್ತಿ ಅವನಿ ಪ್ರಶಾಂತ್‌ ಅವರು ಶುಕ್ರವಾರ ಇಲ್ಲಿ ಕೊನೆಗೊಂಡ ಆಸ್ಟ್ರೇಲಿಯಾ ಮಾಸ್ಟರ್‌ ಅಮೆಚೂರ್‌ ಗಾಲ್ಫ್‌ ಟೂರ್ನಿಯಲ್ಲಿ ಆರನೇ ಸ್ಥಾನ ಪಡೆದುಕೊಂಡರು. ಮೆಲ್ಬರ್ನ್‌ನ ಸದರ್ನ್‌ ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಟೂರ್ನಿಯ ನಾಲ್ಕು ಸುತ್ತುಗಳ ಸ್ಪರ್ಧೆಯನ್ನು ಅವರು ಒಟ್ಟು 297 ಸ್ಕೋರ್‌ಗಳೊಂದಿಗೆ ಕೊನೆಗೊಳಿಸಿದರು. ಕೊನೆಯ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು 75 ಶಾಟ್‌ಗಳನ್ನು ಬಳಸಿಕೊಂಡರು. ಅವನಿ ಅವರು ಮೂರು ಸುತ್ತುಗಳ ಬಳಿಕ ಜಂಟಿ ಎಂಟನೇ ಸ್ಥಾನದಲ್ಲಿದ್ದರು. ಜಪಾನ್‌ನ ಯುನಾ ಅರಾಕಿ (280) ಅವರು ಅಗ್ರಸ್ಥಾನ ಪಡೆದರೆ, ಮಮಿಕ ಶಿಂಚಿ (286) ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಫಿಯೊನಾ ಕ್ಸು (291) ಮೂರನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.